ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ದಾರರಿಗೆ ಮುಂದಿನ ತಿಂಗಳಿನಿಂದ ಎಣ್ಣೆ, ಬೇಳೆ ಕಾಳುಗಳನ್ನು ವಿತರಿಸಲಾಗುವುದು ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಏರ್ಪಡಿಸಲಾಗಿದ್ದ ಆಹಾರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು ಅದರಲ್ಲಿ 5 ಕೆಜಿ ಅಕ್ಕಿಯ ಬದಲು ಎಣ್ಣೆ, ಬೇಳೆ ಕಾಳುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
ಕಾರ್ಡ್ ದಾರರ ಬೇಡಿಕೆಗೆ ಅನುಗುಣವಾಗಿ ಅಕ್ಕಿಯ ಬದಲು ಪೌಷ್ಟಿಕಾಂಶಯುಕ್ತ ಬೇಳೆ ಕಾಳು ಹಾಗೂ ಎಣ್ಣೆ ವಿತರಿಸಲಾಗುವುದು. ರಾಜ್ಯದಲ್ಲಿ 4 ಕೋಟಿ 50 ಲಕ್ಷ ಪಲಾನುಭವಿಗಳಿದ್ದಾರೆ ಎಲ್ಲರಿಗೂ ಈ ಯೋಜನೆ ಅನುಷ್ಠಾನವಾಗಲಿದೆ. ಈಗಾಗಲೇ ಪಲಾನುಭವಿಗಳು ತೆರಿಗೆದಾರರಾಗಿದ್ದರೆ ಹಾಗೂ 7 ಎಕರೆಗೂ ಹೆಚ್ಚು ಜಮೀನು ಹೊಂದಿದ್ದರೆ ಅಂಥವರ ಕಾರ್ಡ್ ಗಳು ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾಯಿಸಲಾಗುವುದು ಎಂದರು.
ಮುಂದಿನ ತಿಂಗಳಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಸಿಗಲಿದೆ ಅಕ್ಕಿ ಬದಲು ಎಣ್ಣೆ- ಪೌಷ್ಟಿಕಾಂಶಯುಕ್ತ ಬೇಳೆಕಾಳು!

