Tuesday, January 13, 2026
Tuesday, January 13, 2026
spot_img

ಇನ್ಮುಂದೆ ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಇಂಧನ ಇಲ್ಲ: ರಾಷ್ಟ್ರ ರಾಜಧಾನಿಯಲ್ಲಿ ಹೊಸ ರೂಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಈ ಹಿನ್ನೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಿಯುಸಿ (Pollution Control Certificate) ಪ್ರಮಾಣಪತ್ರ ಹೊಂದಿರದ ವಾಹನಗಳಿಗೆ ಇಂಧನ ಭರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ವಾಹನ ಮಾಲೀಕರಿಗೆ ಹೊಸ ನಿಯಮವನ್ನು ಪಾಲಿಸಲು ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಬುಧವಾರದ (ಡಿ.17) ನಂತರ, ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದ ವಾಹನಗಳಿಗೆ ಇಂಧನ ಭರಿಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ.

ಗುರುವಾರದಿಂದ (ಡಿ.18) ದೆಹಲಿಯ ಹೊರಗಿನಿಂದ ಬಬಿಎಸ್-VI ಮಾನದಂಡಗಳನ್ನು ಅನುಸರಿಸುವ ವಾಹನಗಳಿಗೆ ಮಾತ್ರ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು, ನಿಯಮ ಮೀರುವಂತಹ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳು ಮತ್ತು ವಾಹನಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಹವಮಾನ ವೈಪ್ಯರಿತ್ಯ, ದಟ್ಟ ಮಂಜಿನಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಉಂಟಾಗಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.

Most Read

error: Content is protected !!