Saturday, April 1, 2023

Latest Posts

ಉಕ್ರೇನ್’ನಿಂದ‌ ಮರಳಿದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ಶಾಸಕ ಅಪ್ಪಚ್ಚುರಂಜನ್

ಹೊಸ ದಿಗಂತ ವರದಿ, ಮಡಿಕೇರಿ:

ಉಕ್ರೇನ್’ನ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ‌ ಕುಶಾಲನಗರದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ಮನೆಗೆ ಮಡಿಕೇರಿ ಕ್ಷೇತ್ರದ ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್ ಭೇಟಿ‌ ನೀಡಿ‌ ಮಾತುಕತೆ ನಡೆಸಿದರಲ್ಲದೆ, ಸಿಹಿ ನೀಡಿದರು.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೆ. ಕೆ.ಮಂಜುನಾಥ ಕುಮಾರ್‌ ಅವರ ಪುತ್ರ ಚಂದನ್ ಗೌಡ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ಲಿಖಿತ್ ಕೊರಗಪ್ಪ ಅವರ ಮನೆಗೆ ತೆರಳಿದ ಶಾಸಕರು ಉಕ್ರೇನ್’ನ ಪರಿಸ್ಥಿತಿಯೊಂದಿಗೆ ಭಾರತಕ್ಕೆ ತಲುಪಿದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ, ಪ್ರಮುಖರಾದ ಪುಡರೀಕಾಕ್ಷ, ಸುದೀಪ್,ಪೋಷಕ ವರ್ಗದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!