ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಕೃಷಿ ಮೇಳದಲ್ಲಿ ಫಲ ಪುಷ್ಪ ಪ್ರದರ್ಶನ ಕಣ್ಮನ ಸೆಳೆಯಿತು. ಹಣ್ಣಿನಲ್ಲಿಯೇ ಕೃಷಿಗೆ ಸಂಬಂಧಿಸಿದ ಸಲಕರಣೆಗಳ ಚಿತ್ರಗಳನ್ನು ಬಿಡಿಸಲಾಗಿತ್ತು. ಕೋಟೆಗಳು ಪುಷ್ಪದಲ್ಲಿ ಅರಳಿದ್ದವು. ಹಣ್ಣಿನಲ್ಲಿ ಅಪ್ಪು ಚಿತ್ರ ಬಿಡಿಸಲಾಗಿತ್ತು.
ವಿಶೇಷವಾಗಿ ಬಳ್ಳಾರಿ ಯ ಮೇಣದ ದೀಪಗಳು ಮತ್ತು ಪಣತಿಗಳು, ಕೊಪ್ಪಳದ ಕಿನ್ನಾಳ ಗೊಂಬೆಗಳು, ಬೀದರನ ಕಸೂತಿ ವಸ್ತುಗಳು, ರಾಯಚೂರಿನ ಮುತ್ತಿನ ಆಭರಣಗಳು, ಯಾದಗಿರಿಯ ಲಂಬಾಣಿ ಉಡುಪುಗಳು ಹಾಗೂ ಕಲಬುರಗಿಯ ಮನೆಯಲ್ಲಿ ತಯಾರಿಸಿದ ಮೆಹೆಂದಿ ಡಿಸೈನ್ ಸೋಪ್ಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿತ್ತು.
ಇದಲ್ಲದೆ ಮಹಿಳೆಯರು ತಯಾರಿಸಿದಂತಹ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ವಿವಿಧ ಬಗೆಯ ಆಹಾರ ತಿಂಡಿ ತಿನಿಸುಗಳು, ಮಹಿಳೆಯರ ಉಡುಪುಗಳು, ಕೈಮಗ್ಗದ ಸೀರೆಗಳು, ಮುತ್ತಿನ ಹಾರಗಳು, ವಿವಿಧ ಬಗೆಯ ಉಪ್ಪಿನಕಾಯಿಗಳು, ರೊಟ್ಟಿ, ಶೇಂಗಾ, ಹಿಂಡಿ, ಶಾವಿಗೆ, ಹಪ್ಪಳ, ಹೀಗೆ ವಿವಿಧ ಬಗೆಯ ಉತ್ಪನ್ನಗಳನ್ನು ಮಾರಾಟ ಮೇಳದಲ್ಲಿ ಕಂಡುಬಂದವು.