ಅಳಿವಿನಂಚಿನಲ್ಲಿರುವ ಮೆಗಾಲೊಡಾನ್ ಶಾರ್ಕ್‌ನ ದಂತ ಗುರುತಿಸಿದ ಬಾಲಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ಸಾಹಿಗಳು ಪಳೆಯುಳಿಕೆಗಳನ್ನು ಗುರುತಿಸಲು ಬಹಳ ದೂರ ಹೋಗುತ್ತಾರೆ. ಕೆಲವರು ಎಷ್ಟೇ ಹುಡುಕಿದರೂ ಸಿಗುವುದಿಲ್ಲ. ಆದರೆ, ಆಕಸ್ಮಿಕವಾಗಿ ಕೆಲವೊಂದು ಸಂಶೋಧಕರಲ್ಲದಿದ್ದರೂ..ಅವರಿಗೆ ಅದರ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲದಿದ್ದರೂ ಒಮ್ಮೆಮ್ಮೆ ಅಪರೂಪದ ವಸ್ತುಗಳನ್ನು ಗುರುತಿಸುತ್ತಾರೆ. ಇತ್ತೀಚೆಗೆ ಮಗುವೊಂದು ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಓಟೋಡಸ್ ಮೆಗಾಲೊಡಾನ್ ಶಾರ್ಕ್ನ ಹಲ್ಲು ಕಂಡುಹಿಡಿದಿದೆ. ಅಮೆರಿಕದ ಮೇರಿಲ್ಯಾಂಡ್ ನ ಸಮುದ್ರ ತೀರದಲ್ಲಿ ಈ ಅಪರೂಪದ ಘಟನೆ ನಡೆದಿದೆ.

ಮೊಲ್ಲಿ ಸ್ಯಾಂಪ್ಸನ್ ಎಂಬ ಹೆಸರಿನ ಮಗು ಸಮುದ್ರತೀರದಲ್ಲಿ ಮೊಣಕಾಲು ಆಳದ ನೀರಿನಲ್ಲಿ ಓಡಾಡುವಾಗ ಅಪರೂಪದ ಒಟೊಡಸ್ ಮೆಗಾಲೊಡಾನ್ ಶಾರ್ಕ್‌ನ ಹಲ್ಲು ಕಾಣಿಸಿತು. ಆ ಸಮಯದಲ್ಲಿ ಆ ಹಲ್ಲಿನೊಂದಿಗೆ ಆ ಬಾಲಕಿ ಸಮುದ್ರತೀರದಲ್ಲಿ ಫೋಟೊ ತೆಗೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 100 ವರ್ಷಗಳಿಗೊಮ್ಮೆ ಇಂತಹ ಅಪರೂಪದ ಗಟನೆ ನಡೆಯುತ್ತದೆ ಎಂದು ಬೀಚ್ ಸಿಬ್ಬಂದಿ ಕೂಡ ಸಂತಸ ವ್ಯಕ್ತಪಡಿಸಿದರು.

ಮೆಗಾಲೊಡಾನ್ ಎಂದರೆ ಅತಿ ದೊಡ್ಡ ಶಾರ್ಕ್. 35 ಮಿಲಿಯನ್ ವರ್ಷಗಳ ಹಿಂದೆ ಈ ಒಟೊಡಸ್ ಮೆಗಾಲೊಡಾನ್ ಶಾರ್ಕ್ ಜಾತಿಗಳು ಪ್ರಪಂಚದ ಎಲ್ಲಾ ಸಮುದ್ರಗಳಲ್ಲಿ ವಾಸಿಸುತ್ತಿದ್ದವು. ನಂತರ ಅವು ಅಳಿದು ಹೋಗಿವೆ ಈ ಶಾರ್ಕ್ 20 ಮೀಟರ್ ಉದ್ದವಿತ್ತು. ಇಲ್ಲಿಯವರೆಗೆ ಎಲ್ಲಿಯೂ ಅಂತಹ ದೊಡ್ಡ ಮೀನುಗಳು ಕಂಡುಬಂದಿಲ್ಲ.

ಕಡಲತೀರದಲ್ಲಿ ಮೊಲ್ಲಿ ಸ್ಯಾಂಪ್ಸನ್ ಕಂಡ ಹಲ್ಲು 5 ಇಂಚು ಉದ್ದವಾಗಿದೆ. ಆ ಹಲ್ಲು ಮಗುವಿನ ಅಂಗೈಗಿಂತ ಸ್ವಲ್ಪ ದೊಡ್ಡದಾಗಿತ್ತು. ಮೊಲ್ಲಿ ಸ್ಯಾಂಪ್ಸನ್ ಅವರ ತಾಯಿ ಅಲಿಸಿಯಾ ಸ್ಯಾಂಪ್ಸನ್ ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!