September 27, 2026
Sunday, September 27, 2026
spot_img

ಹಣ್ಣು ಮೆಣಸಿನಕಾಯಿ ಚಟ್ನಿ+ರಾಗಿರೊಟ್ಟಿ! ಈ ಕಾಂಬಿನೇಷನ್‌ಗೆ ಮನಸೋಲದವರಿಲ್ಲ, ರೆಸಿಪಿ ಇಲ್ಲಿದೆ ನೋಡಿ

ಮನೆಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಮೆಣಸಿನಕಾಯಿ ಇದ್ರೆ ಖಂಡಿತಾ ವೇಸ್ಟ್‌ ಮಾಡಬೇಡಿ. ಈ ಚಟ್ನಿಯಿಂದ ಸೂಪರ್‌ ಆದ ಚಟ್ನಿಯೊಂದನ್ನು ಮಾಡಬಹುದು. ಇದನ್ನು ರಾಗಿ ರೊಟ್ಟಿ ಜೊತೆ ತಿಂದರೆ ರುಚಿ ಅದ್ಭುತವಾಗಿ ಇರುತ್ತದೆ. ಮತ್ಯಾಕೆ ತಡ, ಈ ರೆಸಿಪಿ ಇಂದೇ ಟ್ರೈ ಮಾಡಿ..

ಸಾಮಾಗ್ರಿಗಳು: ಹಣ್ಣು ಮೆಣಸಿನಕಾಯಿ, ಜೀರಿಗೆ, ಹುಣಸೆಹುಳಿ, ಬೆಳ್ಳುಳ್ಳಿ, ಉಪ್ಪು, ಕೊತ್ತಂಬರಿ ಸೊಪ್ಪು, ಬೆಲ್ಲ

ಮಾಡುವ ವಿಧಾನ

ಮೊದಲು ಹಣ್ಣು ಮೆಣಸಿನಕಾಯಿಯನ್ನು ತೊಳೆದು ಒಣಗಿಸಿ, ಆನಂತರ ಬಾಣಲೆಗೆ ಎಣ್ಣೆ ಹಾಕಿ, ಮೆಣಸಿನಕಾಯಿ ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿಕೊಳ್ಳಿ

ಇದಕ್ಕೆ ಬೆಳ್ಳುಳ್ಳಿ, ಜೀರಿಗೆ, ಹುಣಸೆಹುಳಿ, ಉಪ್ಪು, ಕೊತ್ತಂಬರಿ ಸೊಪ್ಪು, ಬೆಲ್ಲ ಎಲ್ಲವನ್ನೂ ಹಾಕಿ ತಣ್ಣಗಾಗಲು ಬಿಡಿ

ತಣ್ಣಗಾದ ನಂತರ ಎಲ್ಲವನ್ನೂ ಸೇರಿಸಿ ತರಿತರಿಯಾಗಿ ರುಬ್ಬಿ, ಕಡೆಗೆ ಇಡೀ ಚಟ್ನಿಗೆ ಒಂದೆರಡು ಸ್ಪೂನ್‌ ಬಿಸಿ ಎಣ್ಣೆ ಹಾಕಿದ್ರೆ ಚಟ್ನಿ ರೆಡಿ

Must Read