ಹೊಸದಿಗಂತ ವರದಿ,ತುಮಕೂರು:
ತುಮಕೂರು ಜಿಲ್ಲೆಯ ಲಲಿತ ಬಿಜೆಪಿ ಬೆಳೆಯಲು ಪ್ರಮುಖರಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಬಿಜೆಪಿಯಿಂದ ದೂರಸರಿಯಲು ನಿರ್ಧರಿಸಿದ್ದಾರೆ.
ತುಮಕೂರು ನಗರದಿಂದ ಬಿಜೆಪಿಯಿಂದ ಟಿಕೆಟ್ ಕಣ್ತಪ್ಪಿ ಹಿನ್ನೆಲೆಯಲ್ಲಿ ಇಂದು ತಮ್ಮ ಬೆಂಬಲಿಗರ ಸಭೆ ಕರೆದು ಅವರ ಅಭಿಪ್ರಾಯ ಸಂಗ್ರಹಿಸಿದ ನಂತರ ಅವರು ಪಕ್ಷದಿಂದ ಹೊರಹೋಗುವ ನಿರ್ಧಾರ ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ ಇಂದು ಬೆಳಿಗ್ಗೆಯೇ 300ಕ್ಕೂ ಹೆಚ್ಚಿನ ಕಾರ್ಯಕರ್ತರು ಬಿಜೆಪಿ ಕಚೇರಿಗೆ ತೆರಳಿ ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ.ಈ ರಾಜಿನಾಮೆ ಪರ್ವ ಪ್ರತಿನಿತ್ಯ ಮುಂದುವರಿಯಲಿದೆ ಎಂದು ತಿಳಿಸಿರುವ ಶಿವಣ್ಣ ತಾವು ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜ್ಯಾಧ್ಯಕ್ಷ ರಿಗೆ ರಾಜೀನಾಮೆಯನ್ನು ರವಾನಿಸುವುದಾಗಿ ತಿಳಿಸಿದರು.