ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ನಾಯಕ ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ರಾಗಾ ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಚಪ್ಪಲಿ ಹೊಲಿಯುವ ರಾಮ್ ಚೇಟ್ ಎಂಬುವರ ಅಂಗಡಿಗೆ ಭೇಟಿ ನೀಡಿದ್ದರು. ಅಲ್ಲಿ ಅವರ ಅಂಗಡಿಯಲ್ಲಿ ಕುಳಿತು ಚಪ್ಪಲಿ ಹೊಲೆದಿದ್ದರು.
ರಾಗಾ ಭೇಟಿ ಬಳಿಕ ರಾಮ್ ಚೇಟ್ ಸ್ಟಾರ್ ಬದಲಾಗಿದೆ. ಜನ ಅವರ ಅಂಗಡಿಗೆ ಬಂದು ಚಪ್ಪಲಿ ಹೊಲಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಿದ್ದಾರೆ. ಇನ್ನು, ರಾಹುಲ್ ಗಾಂಧಿ ಅವರು ಭೇಟಿ ವೇಳೆ ಹೊಲಿದ ಚಪ್ಪಲಿಗೆ ಈಗ ಭಾರಿ ಬೇಡಿಕೆ ಉಂಟಾಗಿದೆ. ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಉದ್ಯಮಿಯೊಬ್ಬರು 10 ಲಕ್ಷ ರೂ. ಆಫರ್ ನೀಡಿದ್ದಾರೆ. ಇಷ್ಟಾದರೂ ರಾಮ್ ಚೇಟ್ ಅವರು ಮಾರಾಟ ಮಾಡಿಲ್ಲ.
ಮಾಧ್ಯಮಗಳೊಂದಿಗೆ ರಾಮ್ ಚೇಟ್ ಮಾತನಾಡಿದ್ದು, ರಾಹುಲ್ ಗಾಂಧಿ ಅವರು ನನ್ನ ಅಂಗಡಿಗೆ ಬಂದು ಹೋದ ಬಳಿಕ ನನ್ನ ಬದುಕೇ ಬದಲಾಗಿದೆ. ಕಾರು, ಬೈಕುಗಳಲ್ಲಿ ಬರುವ ಜನ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಹೊಲಿದ ಚಪ್ಪಲಿಗೆ ಭಾರಿ ಬೇಡಿಕೆ ಉಂಟಾಗಿದೆ. 5 ಲಕ್ಷ ರೂ. ಕೊಡುತ್ತೇವೆ, 10 ಲಕ್ಷ ರೂ. ಕೊಡುತ್ತೇವೆ ಆ ಚಪ್ಪಲಿ ಕೊಡು ಎನ್ನುತ್ತಿದ್ದಾರೆ. ನಾನು ಆ ಚಪ್ಪಲಿ ಹೊಲಿಯಲು ಬಿಟ್ಟು ಹೋದ ಗ್ರಾಹಕನಿಗೂ ಕೊಡುವುದಿಲ್ಲ. ಚಪ್ಪಲಿಯ ಮೊತ್ತವನ್ನು ಗ್ರಾಹಕನಿಗೆ ನೀಡುತ್ತೇನೆ. ಇದನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.