ಹಣಕಾಸಿನ ಕೊರತೆ: 380 ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಲಿದೆ ಸ್ವಿಗ್ಗೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಜಗತ್ತಿನಾದ್ಯಂತ ಅಮೆಜಾನ್‌, ಮೈಕ್ರೋಸಾಫ್ಟ್‌ ನಂತಹ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ಹೊರಹಾಕುತ್ತಿವೆ. ಕಳೆದ ವರ್ಷದ ಕೊನೆಯಲ್ಲಿಯೇ ಆರಂಭವಾದ ಈ ಉದ್ಯೋಗ ಕಡಿತದ ಪರ್ವ ಈ ವರ್ಷವೂ ಮುಂದುವರೆದಿದ್ದು ಶೇರ್‌ ಚಾಟ್‌, ಡಂಜೋ ನಂತಹ ಕಂಪನಿಗಳೂ ಕೂಡ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿವೆ. ಇದೀಗ ಆ ಕಂಪನಿಗಳ ಸಾಲಿಗೆ ಫುಡ್‌ ಡೆಲಿವರಿ ಕಂಪನಿ ಸ್ವಿಗ್ಗೀ ಕೂಡ ಸೇರ್ಪಡೆಯಾಗಿದ್ದು ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡಲು ಮುಂದಾಗಿದೆ.

ಸ್ವಿಗ್ಗಿ ತನ್ನ 380 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು ಇದರ ಜತೆ ತನ್ನ ಮಾಂಸ ಮಾರುಕಟ್ಟೆಯನ್ನು ಮುಚ್ಚುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಕುರಿತು ಕಂಪನಿಯ ಉದ್ಯೋಗಿಗಳಿಗೆ ಸ್ವಿಗ್ಗಿ ಮುಖ್ಯಸ್ಥರು ಪತ್ರ ಬರೆದಿದ್ದು ” ಕಂಪನಿಯು ಲಾಭದಾಯಕತೆಯ ಕುರಿತಾಗಿ ಹೆಚ್ಚಿನ ಗಮನ ಹರಿಸುತ್ತಿದ್ದು ಇದಕ್ಕೆ ಅನುಗುಣವಾಗಿ ಹಣವನ್ನು ಸಂರಕ್ಷಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ” ಎಂದು ಬರೆದಿದ್ದಾರೆ. ಅಲ್ಲದೇ ಈ ಉದ್ಯೋಗ ಕಡಿತವನ್ನು ಅತ್ಯಂತ ಕಷ್ಟಕರ ನಿರ್ಧಾರ ಎಂದಿದ್ದಾರೆ.

ಪ್ರಸ್ತುತ 380 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದು ಸಂತ್ರಸ್ತ ನೌಕರರಿಗೆ ಪ್ರತಿ ವರ್ಷ ಸೇವೆಯ ಆಧಾರದ ಮೇಲೆ ಮೂರರಿಂದ ಆರು ತಿಂಗಳ ವಿಚ್ಛೇದನ ಪ್ಯಾಕೇಜ್ ಮತ್ತು ಹೆಚ್ಚುವರಿ ದಿನಗಳನ್ನು ಪಾವತಿಸಲಾಗುವುದು ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!