ಮೇಷ
ನಿಮಗನಿಸಿದ್ದನ್ನು ಮಾಡಲು ನೀವಿಂದು ಸ್ವತಂತ್ರರು. ಏಕೆಂದರೆ ನಿಮ್ಮ ಉದ್ದೇಶಗಳೆಲ್ಲ ಇಂದು ನೆರವೇರುತ್ತದೆ. ಆಪ್ತ ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ.
ವೃಷಭ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು. ಆರೋಗ್ಯ ಸಮಸ್ಯೆ ಇದ್ದರೆ ಅದು ಇಂದು ಪರಿಹಾರ ಕಾಣಲಿದೆ. ಆರ್ಥಿಕ ಉನ್ನತಿ.
ಮಿಥುನ
ಅನಿರೀಕ್ಷಿತ ಕ್ಷೇತ್ರದಿಂದ ಮೆಚ್ಚುಗೆ ಪಡೆಯುವಿರಿ. ವಾದಕ್ಕೆ ಇಳಿಯದಿರಿ. ಇತರರ ಅಭಿಪ್ರಾಯ ಮನ್ನಿಸಲು ಕಲಿಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ.
ಕಟಕ
ಉದ್ಯೋಗದಲ್ಲಿ ಕೆಲ ದಿನಗಳಿಂದ ನೀವು ಬಯಸಿದಂತೆ ಸಾಗುತ್ತಿಲ್ಲ. ಸಹಚರರ ಜತೆ ಹೊಂದಾಣಿಕೆ ಮುಖ್ಯ ಎಂಬುದನ್ನು ಅರಿತುಕೊಳ್ಳಿ.
ಸಿಂಹ
ಹಳೆ ಸ್ನೇಹಿತರು ದೊರೆತಾರು. ಹಳೆಯ ಹೂಡಿಕೆಯೊಂದು ಇಂದು ಫಲ ನೀಡುವ ಸಾಧ್ಯತೆಯಿದೆ. ಪ್ರೇಮಿಗಳ ಪಾಲಿಗೆ ಹೊಸ ಸಮಸ್ಯೆ ಸೃಷ್ಟಿ.
ಕನ್ಯಾ
ನಿಮ್ಮ ಕಾರ್ಯ ಸುಲಭದಲ್ಲಿ ಆಗದಿರುವ ಚಿಂತೆ. ಸಣ್ಣ ವಿಷಯಗಳು ಮನಸ್ಸು ಕೊರೆಯುತ್ತವೆ. ಕ್ಷುಲ್ಲಕ ಕಾರಣಕ್ಕೆ ಚಿಂತಿಸುವುದು ನಿಲ್ಲಿಸಿರಿ.
ತುಲಾ
ಸಂಬಂಧದಲ್ಲಿ ನಿಧಾನ ಪ್ರಗತಿಯಿಂದ ಅಸಹನೆ. ತಾಳ್ಮೆ ವಹಿಸಿದರೆ ಪ್ರೀತಿಯ ಬದುಕು ಹೊಸ ಎತ್ತರ ತಲುಪಲಿದೆ. ಆರೋಗ್ಯ ಸುಸ್ಥಿರತೆ ಕಾಯ್ದುಕೊಳ್ಳಿ.
ವೃಶ್ಚಿಕ
ಕಾಡುತ್ತಿದ್ದ ಮೈಕೈ ನೋವು ಇಂದು ನಿವಾರಣೆ ಆಗಲಿದೆ. ಹಾಗಾಗಿ ಮನಸ್ಸಿಗೆ ನಿರಾಳತೆ. ವೃತ್ತಿಯಲ್ಲಿ ಹೊಸ ಒತ್ತಡ ನಿಭಾಯಿಸಲು ಸಫಲರಾಗುವಿರಿ.
ಧನು
ಪ್ರಮುಖ ಆರ್ಥಿಕ ವ್ಯವಹಾರವೊಂದು ಅಂತಿಮಗೊಳ್ಳಲಿದೆ. ಇತರರಿಗೆ ನೆರವು ನೀಡಲು ಹಿಂಜರಿಕೆ ಬೇಡ. ಅದು ನಿಮಗೂ ಒಳಿತು ತರಲಿದೆ.
ಮಕರ
ಯಾರಾದರೂ ನಿಮ್ಮಿಂದ ದೂರ ಸರಿದರೆ ಆ ಬಗ್ಗೆ ಭಾವುಕರಾಗದಿರಿ. ಅವರನ್ನು ಅವರ ಪಾಡಿಗೆ ಬಿಡಿ. ನಿಮ್ಮ ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿ.
ಕುಂಭ
ಕೇಳದೇ ಯಾರಿಗೂ ಸಲಹೆ ನೀಡಲು ಹೋಗದಿರಿ. ನೀವೇ ಇಕ್ಕಟ್ಟಿಗೆ ಸಿಲುಕಬಹುದು. ಪ್ರೀತಿಪಾತ್ರರ ಅನಿರೀಕ್ಷಿತ ಭೇಟಿ ಸಂಭವ.
ಮೀನ
ಬಾಕಿ ಉಳಿದ ಕಾರ್ಯ ಇಂದು ಪೂರೈಸುವಿರಿ. ನಿಮ್ಮ ಕೆಲಸಕ್ಕೆ ಕೆಲವರಿಂದ ಅಡ್ಡಿ ಉಂಟಾದೀತು. ಭಾವುಕ ಬಂಧನದಿಂದ ಹೊರಬನ್ನಿ.