ದಿನಭವಿಷ್ಯ : ಕಾರ್ಯರಂಗದಲ್ಲಿ ಮುನ್ನಡೆ, ಆಪ್ತವರ್ಗದಿಂದ ಸಕಾಲಿಕ ನೆರವು

ಮೇಷ
ಮುಖ್ಯ ವಿಷಯ ವೊಂದರ ಕುರಿತು ಅನಿಶ್ಚಿತತೆ ಕಾಡುತ್ತದೆ. ಅವಶ್ಯ ಬಿದ್ದರೆ ಹಿರಿಯರ ಸಲಹೆ ಪಡೆಯಿರಿ. ಹಣದ ವಿಷಯದಲ್ಲಿ ನಷ್ಟ ಆದೀತು.

ವೃಷಭ
ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿಲ್ಲ.ಯಾರ ಜತೆಗೋ ಸಂಘರ್ಷ ಉಂಟಾದೀತು. ಕೆಲವರು ನಿಮ್ಮಿಂದ ದೂರ ಸರಿದಾರು.

ಮಿಥುನ
ಕೌಟುಂಬಿಕ ಸಮ್ಮಿಲನ ಸಂಭವ. ಎಲ್ಲರ ಸಂಗದಲ್ಲಿ ಸಂತೋಷದ ಕಾಲಕ್ಷೇಪ. ವೃತ್ತಿಯಲ್ಲಿ ಕೆಲವರ ವಿರೋಧ ಉಂಟಾದರೂ ನಿಮಗೆ ಬಾಧಕವಾಗದು.

ಕಟಕ
ನಿಮ್ಮ ಸುತ್ತ ಸಂತೋಷ, ಉಲ್ಲಾಪರಾಹ್ನದ ನಂತರ ನಿಮ್ಮ ಉಲ್ಲಾಸಕ್ಕೆ ಕುಂದು ಬರುವ ಬೆಳವಣಿಗೆ ಸಂಭವಿಸಬಹುದು.

ಸಿಂಹ
ಆರ್ಥಿಕವಾಗಿ ಫಲಪ್ರದ ದಿನ. ವ್ಯವಹಾರದಲ್ಲಿ ಸಫಲತೆ. ಆರ್ಥಿಕ ಯೋಜನೆಗಳು ಯಶಸ್ಸು ಕಾಣುತ್ತವೆ. ಕೌಟುಂಬಿಕ ಬೇಡಿಕೆಗಳನ್ನು ಈಡೇರಿಸುವಿರಿ.

ಕನ್ಯಾ
ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಜಾಗ ಅಥವಾ ಮನೆ ಖರೀದಿಗೆ ಕಾಲ ಸೂಕ್ತವಾಗಿದೆ. ಆರ್ಥಿಕ ಬಿಕ್ಕಟ್ಟು ಬಾಧಿಸದು. ಆಪ್ತರೊಡನೆ ಸಂವಾದ.

ತುಲಾ
ಎಲ್ಲವೂ ಇದ್ದೂ ಯಾವುದೋ ಕೊರಗು ಬಾಧಿಸುವುದು. ಸಣ್ಣ ವಿಷಯಗಳನ್ನು ಬಹುವಾಗಿ ಹಚ್ಚಿಕೊಳ್ಳುತ್ತೀರಿ. ಕೌಟುಂಬಿಕ ಸಹಕಾರ.

ವೃಶ್ಚಿಕ
ಕೆಲವು ವಿಷಯಗಳಲ್ಲಿ ಉದಾರಿಯಾಗಿ ನಡಕೊಳ್ಳಿರಿ. ಜಿಪುಣತನ ತೋರದಿರಿ.  ಮನೆಯಲ್ಲಿನ ಆವಶ್ಯಕತೆ ಈಡೇರಿಸಲು ಆದ್ಯತೆ ಕೊಡಿರಿ.
ಆರ್ಥಿಕ ಸಂಕಷ್ಟ.

ಧನು
ಮನೆಯಲ್ಲಿ ಹರ್ಷದ ವಾತಾವರಣ. ಆರೋಗ್ಯ ಸಂಬಂಧಿ ಸಮಸ್ಯೆ ನಿವಾರಣೆ. ಆಪ್ತರಿಂದ ಸಂತೋಷದ ಸುದ್ದಿ ಕೇಳುವಿರಿ. ಆರ್ಥಿಕ ಸ್ಥಿತಿ ಸುಧಾರಣೆ.

ಮಕರ
ಆರ್ಥಿಕ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಕೆಲವು ವಿಷಯಗಳಲ್ಲಿ ತಾಳ್ಮೆಯಿಂದ ಕಾದರೆ ನಿಮಗೆ ಉತ್ತಮ ಫಲಿತಾಂಶ ದೊರಕಲಿದೆ. ಅವಸರ ಬೇಡ.

ಕುಂಭ
ಸಮಸ್ಯೆ ಪರಿಹರಿಸಲು ಆತುರ ಮತ್ತು ದುಡುಕುತನ ತೋರದಿರಿ. ಅದನ್ನು ಸಾವಧಾನದಿಂದ ಪರಿಹರಿಸಿರಿ. ಆರ್ಥಿಕ ಸ್ಥಿರತೆ.

ಮೀನ
ಉತ್ಸಾಹದ ದಿನ. ಕೌಟುಂಬಿಕ ಸಮಸ್ಯೆ ಪರಿಹಾರ. ಮಾಡಿದ ಸಾಧನೆಗೆ ಶ್ಲಾಘನೆ. ಬಂಧುಗಳು ಶುಭಸುದ್ದಿ ತರುತ್ತಾರೆ. ಆರ್ಥಿಕ ಸ್ಥಿತಿ ಸದೃಢ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!