ಮೇಷ
ಅತೀ ಆಪ್ತರ ಜತೆ ಭಿನ್ನಾಭಿಪ್ರಾಯ. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಬಂಧು ಭೇಟಿಯಿಂದ ಸಂತೋಷ. ಧನವ್ಯಯ.
ವೃಷಭ
ಮನೆಯಲ್ಲಿ ಹೆಚ್ಚು ಹೊಣೆಗಾರಿಕೆ. ಇತರರ ಕೆಲಸವನ್ನೂ ನೀವೇ ಮಾಡಬೇಕಾದ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ.
ಮಿಥುನ
ನಿಮಗೆ ಪೂರಕವಾದ ದಿನ. ಹಾಗಾಗಿ ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವ್ಯವಹಾರದಲ್ಲಿ ಉನ್ನತಿ, ಮೆಚ್ಚುಗೆ.
ಕಟಕ
ದಿನವಿಡೀ ಕಾರ್ಯದ ಒತ್ತಡ. ಯೋಜನೆ ಸಫಲ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ, ಬೇಗುದಿ ಮರೆಯಿರಿ.
ಸಿಂಹ
ಮಹತ್ವದ ಕಾರ್ಯಕ್ಕೆ ಇಂದು ಕೈಹಾಕದಿರಿ. ಅದು ನಿರೀಕ್ಷಿತ ಫಲ ನೀಡದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುವುದು.
ಕನ್ಯಾ
ಪ್ರೀತಿಪಾತ್ರರ ಜತೆ ವಾಗ್ವಾದ. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಿದರೆ ಅದನ್ನು ನಿವಾರಿಸಬಹುದು. ಖರ್ಚು ಹೆಚ್ಚಲಿದೆ.
ತುಲಾ
ಏರುಪೇರಿನ ದಿನ. ಸಕಾಲದಲ್ಲಿ ಆಹಾರ ಸೇವನೆ ಒಳಿತು. ಇಲ್ಲವಾದರೆ ಆರೋಗ್ಯ ಸಮಸ್ಯೆ. ಉದ್ಯಮದಲ್ಲಿ ಒತ್ತಡ ಹೆಚ್ಚಲಿದೆ.
ವೃಶ್ಚಿಕ
ಇಂದು ನಿಮ್ಮ ಕ್ಷೇತ್ರದಲ್ಲಿ ಕಠಿಣ ಸವಾಲು ಎದುರಿಸುವಿರಿ. ಆತ್ಮವಿಶ್ವಾಸ
ಕಳಕೊಳ್ಳದಿರಿ. ಕೊನೆಗೆ ಎಲ್ಲವೂ ನಿಮ್ಮ ಪರವಾಗಿ ನಡೆಯುವುದು.
ಧನು
ಕೌಟುಂಬಿಕ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಲಿದೆ. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿ. ಕೋಪತಾಪ ನಿಯಂತ್ರಿಸಿ.
ಮಕರ
ಕುಟುಂಬ ಸದಸ್ಯರ ಬೇಡಿಕೆಗಳಿಗೆ ಆದ್ಯತೆ ಕೊಡಬೇಕಾಗುವುದು. ಕಠಿಣ ಕಾರ್ಯವೂ ಸುಲಲಿತವಾಗಿ ನೆರವೇರುತ್ತದೆ.
ಕುಂಭ
ವಸ್ತು ಖರೀದಿಯ ಹುಮ್ಮಸ್ಸಿನಿಂದ ಜೇಬಿಗೆ ಕತ್ತರಿ ಬೀಳಬಹುದು. ಕುಟುಂಬ ಸದಸ್ಯರ ಜತೆ ಶಾಂತಚಿತ್ತದಿಂದ ವರ್ತಿಸಿರಿ.
ಮೀನ
ವಿವೇಚಿಸಿ ನಿರ್ಧಾರ ತಾಳಿ. ನಿಮ್ಮ ನಿರ್ಧಾರವು ಪ್ರತಿಕೂಲ ಪರಿಣಾಮ ಬೀರಬಹುದು. ಬಂಧುಗಳ ಕಿರಿಕಿರಿ ಅನುಭವಿಸುವಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ