ದಿನಭವಿಷ್ಯ: ಹೊಸ ಜನರ ಸಂಪರ್ಕ, ವೃತ್ತಿ- ವ್ಯಾಪಾರ, ವ್ಯವಹಾರಕ್ಕೆ ಅನುಕೂಲ

ಮೇಷ
ಈ ದಿನ ನಿಮಗೆ  ನಿರುತ್ಸಾಹ ಕಾಡುವುದು. ಕೆಲಸವೊಂದು ಇನ್ನೂ ಪೂರೈಸದ ಹತಾಶೆ. ಬಂಧುಗಳಿಂದ ಟೀಕೆ ಕೇಳಿಬಂದೀತು. ಸಂಯಮ ವಹಿಸಿ.

ವೃಷಭ
ಇತ್ತೀಚಿನ ಕೆಲವು ಬೆಳವಣಿಗೆ ನಿಮ್ಮನ್ನು ನಿರಾಶೆಗೆ ದೂಡುತ್ತದೆ.  ನಿಮ್ಮ ಉದ್ದೇಶ ಸಾಧಿಸಲು ವಿಫಲವಾದರೆ ಹತಾಶರಾಗದಿರಿ. ಪ್ರಯತ್ನ ನಿಲ್ಲಿಸಬೇಡಿ.

ಮಿಥುನ
ನೀವಿಂದು ಭಾವುಕರಾಗುವ ಪ್ರಸಂಗ. ಆದರೆ ಮನಸ್ಸಿನ ಮೇಲೆ ನಿಯಂತ್ರಣ ತಪ್ಪಲು ಅವಕಾಶ ಕೊಡಬೇಡಿ. ಆಪ್ತರ ಜತೆಗೆ ಜಗಳವಾಡದಿರಿ.

ಕಟಕ
ಸಂತೋಷದ ದಿನ. ನೀವು ಬಯಸಿದ ಕಾರ್ಯ ಸಫಲ. ಇತರರಿಗೆ ನೆರವು ನೀಡುವಿರಿ. ಬಂಧುಗಳಿಂದ ಸಹಕಾರ.

ಸಿಂಹ
ನೆಗೆಟಿವ್ ಚಿಂತನೆಗಳು ಇಂದು ಮನಸ್ಸಿನಿಂದ ತೊಲಗುತ್ತವೆ. ಹಾಗಾಗಿ ನಿರಾಳರಾಗುವಿರಿ. ಕೆಲಸದ ಒತ್ತಡದಿಂದಲೂ ಇಂದು ನಿಮಗೆ ಮುಕ್ತಿ ದೊರಕುವುದು.

ಕನ್ಯಾ
ಪ್ರೀತಿಪಾತ್ರರ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು. ದಿನವಿಡೀ ನಿಮ್ಮನ್ನು ಕಾಡಲು ಅವಕಾಶ ಕೊಡದಿರಿ. ಹೊಂದಾಣಿಕೆ ಮಾಡಿಕೊಳ್ಳಿ.

ತುಲಾ
ನಿಮ್ಮ ಖಾಸಗಿ ಬದುಕಿಗೂ ತುಸು ಗಮನ ಕೊಡಿ. ಕೆಲಸದ ಧಾವಂತದಲ್ಲಿ ಖಾಸಗಿ ಬದುಕು ಮರೆಯಬೇಡಿ. ಸ್ನೇಹಿತರಿಂದ ಟೀಕೆ ಕೇಳುವಿರಿ.

ವೃಶ್ಚಿಕ
ಧಾರ್ಮಿಕ ವಿಚಾರ ಇಂದು ನಿಮಗೆ ಆಪ್ತವಾಗಬಹುದು. ಸಮಸ್ಯೆಗಳನ್ನು ಮರೆಯಲು ಇದರಿಂದ ಸಹಕಾರಿ. ಬಂಧುಗಳ ಭೇಟಿಯಿಂದ ಸಂತಸ.

ಧನು
ನೀವಿಂದು ಗುಣಾತ್ಮಕ ಧೋರಣೆ  ಹೊಂದುತ್ತೀರಿ. ಇದರಿಂದ ಸಮಸ್ಯೆ ಎದುರಿಸುವ ಸ್ಥೈರ್ಯ ಸಿಗಲಿದೆ. ಬಂಧುಗಳಿಂದ ಸಹಕಾರ ಲಭ್ಯ.

ಮಕರ
ಮಾನಸಿಕ ಅಥವಾ ದೈಹಿಕ ಕಾರಣದಿಂದ ನಿಮಗಿಂದು ಅಶಾಂತ ಮನಸ್ಥಿತಿ. ಕೆಲಸದಲ್ಲಿ ಏಕಾಗ್ರತೆ ಮೂಡದು. ಒತ್ತಡದ ಕಾರ್ಯ ಇಂದು ಬದಿಗಿಡಿ.

ಕುಂಭ
ಏಕಾಂಗಿತನ ಇಂದು ನಿಮಗೆ ಆಪ್ತವಾಗಲಿದೆ. ಇತರರ ಜತೆ ಬೆರೆಯಲು ಮನಸ್ಸು ಬಾರದು. ನಿಮ್ಮ ಮನದೊಳಗಿನ ತುಮುಲವೇ ಇದಕ್ಕೆ ಕಾರಣ.

ಮೀನ
ಆದ್ಯತೆಯ ಕೆಲಸ ಮೊದಲು ಮುಗಿಸಿ. ನೀವಾಗಿ ಬೇರೆ ವಿಷಯಕ್ಕೆ ಆದ್ಯತೆ ಕೊಡದಿರಿ. ಪ್ರೀತಿ, ಕುಟುಂಬ, ಕೆಲಸದ ಮಧ್ಯೆ ಸಮನ್ವಯ ಸಾಧಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!