ದಿನಭವಿಷ್ಯ: ಶಿಸ್ತಿನಿಂದ ಇಂದಿನ ಕಾರ್ಯದಲ್ಲಿ ಯಶಸ್ಸು ಸಿಗಲಿದೆ, ವ್ಯಾಪಾರದಲ್ಲಿ ಲಾಭ

ಮೇಷ
ವೃತ್ತಿಯಲ್ಲಿ ಒತ್ತಡ. ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಲಿಯಿರಿ. ಬೆನ್ನುನೋವು ಕಾಲುನೋವು ಸಮಸ್ಯೆ ಕಾಡಬಹುದು. ವಿಶ್ರಾಂತಿ ಅವಶ್ಯವಾದೀತು.

ವೃಷಭ
ಇತರರ ಜತೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿ. ಇದು ನಿಮ್ಮ ವರ್ಚಸ್ಸನ್ನೂ ಹೆಚ್ಚಿಸುವುದು. ನಿಮಗಿಷ್ಟದ ವ್ಯಕ್ತಿಯ ಜತೆ ಕಾಲಕ್ಷೇಪ.

ಮಿಥುನ
ನೀವು ಮಾಡಿರುವ ಹಣದ  ಹೂಡಿಕೆ ಇಂದು ನಿಮಗೆ ಅಪೇಕ್ಷಿಸಿದ ಲಾಭ ಕೊಡದು. ಆರ್ಥಿಕ ಒತ್ತಡ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.

ಕಟಕ
ವ್ಯಕ್ತಿಯೊಬ್ಬರು ಇಡೀ ದಿನ ನಿಮಗೆ ಕಿರಿಕಿರಿ ಸೃಷ್ಟಿಸಬಹುದು. ಅವರನ್ನು ಕಡೆಗಣಿಸಿ. ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡಬೇಡಿ. ಆರ್ಥಿಕ ಬಿಕ್ಕಟ್ಟು.

ಸಿಂಹ
ಕಾಲಮಿತಿಯೊಳಗೆ ನಿಮ್ಮ ಕಾರ್ಯ ಮುಗಿವುದು. ಅದಕ್ಕಾಗಿ ಮೆಚ್ಚುಗೆ ಪಡೆಯುವಿರಿ. ಹಣದ ಸಮಸ್ಯೆ ಕಾಡದು, ಖರ್ಚು ಮಾಡಲು ತೊಂದರೆಯಿಲ್ಲ.

ಕನ್ಯಾ
ವಿರಾಮವಿಲ್ಲದ ದಿನ. ಸದಾ ಒಂದಿಲ್ಲೊಂದು ಕಾರ್ಯನಿರತ. ಮನೆಯ ನವೀಕರಣ ಕಾರ್ಯ ನಡೆದೀತು. ವೃದ್ಧರು ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ತುಲಾ
ನಿಮ್ಮ ಪಾಲಿನ ಕರ್ತವ್ಯ ನೆರವೇರಿಸಿ. ಯಾವುದೇ ಕೆಲಸ ಬಾಕಿ ಉಳಿಯದಿರಲಿ. ಸಂಗಾತಿಯನ್ನು ಅರ್ಥ ಮಾಡಿಕೊಳ್ಳಿ.  ವೈಮನಸ್ಸು ತಪ್ಪಿಸಿ.

ವೃಶ್ಚಿಕ
ಆತ್ಮೀಯ ಸಂಬಂಧದಲ್ಲಿ ಬಿರುಕು ಉಂಟಾದೀತು. ಅತಿಯಾದ ನಿರೀಕ್ಷೆ ಅದಕ್ಕೆ ಕಾರಣ. ಆರೋಗ್ಯ ಸಮಸ್ಯೆ ಮನಸ್ಸಿನ ನೆಮ್ಮದಿ ಕಲಕಬಹುದು. ಖರ್ಚು ಅಧಿಕವಾದೀತು.

ಧನು
ಅತಿಯಾದ ಕೆಲಸದ ಒತ್ತಡ. ಇದು ಮನಸ್ಸು ಮತ್ತು ದೇಹ ಎರಡರ ಮೇಲೂ ಪರಿಣಾಮ ಬೀರಬಹುದು. ನಿಮಗೆ ಬೇಕಾಗಿರುವುದು ವಿರಾಮ.

ಮಕರ
ಕೆಲ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರಕ್ಕೆ ಇಂದು ಯತ್ನಿಸಿರಿ. ಇತರರಿಂದ ಅತಿಯಾಗಿ ನಿರೀಕ್ಷಿಸದಿರಿ. ಆಹಾರ ಸೇವನೆಯಲ್ಲಿ ಸಮತೋಲನವಿರಲಿ.

ಕುಂಭ
ಅತಿಯಾದ ಖರ್ಚು. ಸಂಗಾತಿ ಜತೆಗೆ ಹೊಂದಾಣಿಕೆ ಇರಲಿ. ನಿಮ್ಮ ಕಠಿಣ ಧೋರಣೆ ಸಂಬಂಧ ಹಾಳು ಮಾಡಬಹುದು. ವೃತ್ತಿಯಲ್ಲಿ ಹಿನ್ನಡೆ.

ಮೀನ
ಜನರೊಂದಿಗೆ ಇಂದು ಹೆಚ್ಚು ತಾಳ್ಮೆಯಿಂದ ವ್ಯವಹರಿಸಬೇಕು. ಅನವಶ್ಯ ವಿಷಯಗಳಿಗೆ ಖರ್ಚು ಮಾಡದಿರಿ. ವೃತ್ತಿಯಲ್ಲಿ  ಹಿನ್ನಡೆ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!