ಮೇಷ
ಆದ್ಯತೆಯ ಮೇರೆಗೆ ಕಾರ್ಯಾಚರಿಸಿ. ಅಮುಖ್ಯ ಕಾರ್ಯಗಳಿಗೆ ಮಹತ್ವ ಕೊಡಬೇಡಿ. ನೆಗೆಟಿವ್ ಮನುಷ್ಯರ ಪ್ರಭಾವಕ್ಕೆ ಸಿಲುಕಬೇಡಿ.
ವೃಷಭ
ಯಾವುದೇ ಕೆಲಸ ಸಫಲವಾಗಲು ಪರಸ್ಪರ ಸಹಕಾರ ಅಗತ್ಯ. ಈ ವಿಷಯ ಇಂದು ನೀವು ಮನದಲ್ಲಿ ಇಟ್ಟುಕೊಳ್ಳಬೇಕು. ಬಿಗುಮಾನ ಬಿಡಿ.
ಮಿಥುನ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಹಿಂಜರಿಕೆ ಬೇಡ. ಮನೆಯಲ್ಲಿ ಮಾತಿನ ಸಂಘರ್ಷ ನಡೆದೀತು. ಸಂಯಮ ಅವಶ್ಯ.
ಕಟಕ
ಕೆಲ ವಿಷಯಗಳಲ್ಲಿ ಕುಟುಂಬ ಸದಸ್ಯರ ಜತೆ ರಹಸ್ಯ ಬೇಡ. ಅದು ವಿರಸಕ್ಕೆ ಕಾರಣ ಆದೀತು. ಮುಕ್ತ ಮಾತುಕತೆ ಒಳ್ಳೆಯದು.
ಸಿಂಹ
ಕಾಡುತ್ತಿದ್ದ ದೈಹಿಕ ನೋವಿಗೆ ಶಮನ ದೊರಕುವುದು. ಖರ್ಚು ಹೆಚ್ಚಲಿದೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಮಾನಸಿಕ ನಿರಾಳತೆ.
ಕನ್ಯಾ
ಬಂಧುಗಳಿಂದ ಧನಲಾಭ. ಚಿಂತೆಗೆ ಕಾರಣವಾಗಿದ್ದ ವಿವಾದ ಪರಿಹಾರ. ನೆರೆಯವರ ಜತೆಗೆ ಸಂಘರ್ಷ ತಪ್ಪಿಸುವುದೊಳಿತು.
ತುಲಾ
ದೈಹಿಕ ಶ್ರಮ ಹೆಚ್ಚು. ಮನೆಯಲ್ಲಿನ ಬೇಡಿಕೆ ಈಡೇರಿಸಲು ಹೆಚ್ಚು ಶ್ರಮ ಪಡುವಿರಿ. ಹಣದ ಕೊರತೆ ಕಾಡಬಹುದು. ಮಿತವ್ಯಯ ಸಾಧಿಸಿರಿ.
ವೃಶ್ಚಿಕ
ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿರ. ಕಾರ್ಯದಲ್ಲಿ ಸಫಲತೆ. ಸ್ಪರ್ಧಾತ್ಮಕ ವಿಷಯದಲ್ಲಿ ಗೆಲವು ನಿಶ್ಚಿತ. ಈ ದಿನ ಸದುಪಯೋಗಪಡಿಸಿ.
ಧನು
ಹಲವು ಅವಕಾಶಗಳು. ಆಯ್ಕೆಯ ಗೊಂದಲ ಕಾಡಲಿದೆ. ಯೋಚಿಸಿ ನಿರ್ಧಾರ ತಾಳಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಪಥ್ಯಾಹಾರ ಒಳಿತು.
ಮಕರ
ಪ್ರಮುಖ ವಿಷಯ ದಲ್ಲಿ ಅನಿಶ್ಚಿತತೆ ಕಾಡುವುದು. ಗೊಂದಲಕ್ಕೆ ಆಸ್ಪದ ನೀಡದಿರಿ. ಹಿತೈಷಿಗಳ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಿ.
ಕುಂಭ
ಮನೆಯಲ್ಲಿನ ಸಮಸ್ಯೆ ಇಂದು ಪರಿಹಾರ ಕಾಣಲಿದೆ. ಇನ್ನಿತರ ವಿಷಯಗಳತ್ತ ಗಮನ ಹರಿಸಲು ಸಕಾಲ. ಇನ್ನು ವಿಳಂಬ ಮಾಡದಿರಿ.
ಮೀನ
ನಿಮ್ಮ ಆಹಾರ ಸೇವನೆಯಲ್ಲಿ ಹೆಚ್ಚು ಶಿಸ್ತು ರೂಪಿಸಿ. ಅನಿಯಮಿತ ಆಹಾರದಿಂದ ಆರೋಗ್ಯ ಸಮಸ್ಯೆ ಸಂಭವ. ಕೌಟುಂಬಿಕ ಸಹಕಾರ.