Friday, March 24, 2023

Latest Posts

ದಿನಭವಿಷ್ಯ: ವೃತ್ತಿಯಲ್ಲಿ ಒತ್ತಡ ಎದುರಾಗಿ ಕುಟುಂಬದವರ ಮೇಲೂ ಕೂಗಾಡಬಹುದು!

ಸೋಮವಾರ, 6 ಮಾರ್ಚ್ 2023, ಮಂಗಳೂರು

ಮೇಷ
ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವು ಇಂದು ಆದ್ಯತೆ ಪಡೆಯುವುದು. ಖಾಸಗಿ ಬದುಕಿನಲ್ಲಿ ಎಲ್ಲವೂ ಸುಗಮ. ಅಡ್ಡಿಗಳ ನಿವಾರಣೆ.

ವೃಷಭ
ನಿಮ್ಮ ನಡೆನುಡಿಯ  ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಒತ್ತಡ ಕಡಿಮೆ. ಆಪ್ತರೊಬ್ಬರು ನಿಮ್ಮ ಭಾವನೆಗೆ ಪೂರಕವಾಗಿ ಸ್ಪಂದಿಸುತ್ತಾರೆ.

ಮಿಥುನ
ವೃತ್ತಿಗೆ ಸಂಬಂಧಿಸಿದ ಒತ್ತಡವು ಕುಟುಂಬದ ಮೇಲೂ ಪರಿಣಾಮ ಬೀರಬಹುದು. ಇದರಿಂದ ಮಾನಸಿಕ ನೆಮ್ಮದಿ ದೂರ. ವೆಚ್ಚ ಅಧಿಕವಾಗುವುದು.

ಕಟಕ
ಅದೃಷ್ಟವು ಇಂದು ನಿಮ್ಮೊಡನಿದೆ.  ಶುಭ ಸುದ್ದಿ ಕೇಳುವಿರಿ. ನಿರೀಕ್ಷಿಸಿದ ಕಾರ್ಯ ಸಫಲ. ಪ್ರೀತಿಯ ಭಾವನೆ ವ್ಯಕ್ತಪಡಿಸಲು ಹಿಂಜರಿಯದಿರಿ.

ಸಿಂಹ
ವೃತ್ತಿಯಲ್ಲಿ ಉತ್ತಮ
ನಿರ್ವಹಣೆ. ಕಾರ್ಯ ಸಿದ್ಧಿ. ಕೌಟುಂಬಿಕ ವಿಚಾರದಲ್ಲಿ ಮಾತ್ರ ಕೆಲವು ಹಿನ್ನಡೆ ಬಾಧಿಸುವುದು. ಭಾವನಾತ್ಮಕ ಸಂಘರ್ಷ.

ಕನ್ಯಾ
ಇತರರು ಮೇಲೆ ನಿಮ್ಮ  ಅಧಿಕಾರ ಚಲಾಯಿಸಲು ಯತ್ನಿಸುತ್ತಾರೆ . ಅವರ ಮನಸ್ತಾಪ ಕಟ್ಟಿಕೊಳ್ಳುವಿರಿ. ಮನಸ್ಸಿನ ನೆಮ್ಮದಿ ದೂರವಾಗುವುದು.

ತುಲಾ
ಭಾವನಾತ್ಮಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಮನಸ್ಸಿಗೆ ನೋವು ತರುವ ಬೆಳವಣಿಗೆ. ಇದು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.

ವೃಶ್ಚಿಕ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಗಮನ ಬೇರೆಡೆಗೆ ಹರಿಸದಿರಿ. ಕರ್ತವ್ಯ ಮೊದಲು ಮುಗಿಸಿ. ಕುಟುಂಬದ ಕಡೆಗೆ ಗಮನ ಹರಿಸಲು ಸಮಯವಿರದು.

ಧನು
ನೀವಿಂದು ತೆಗೆದುಕೊಳ್ಳುವ  ನಿರ್ಧಾರವು ಭವಿಷ್ಯದಲ್ಲಿ ಮಹತ್ತರ ಪರಿಣಾಮ ಬೀರಬಹುದು. ಹಾಗಾಗಿ ವಿವೇಚಿಸಿ ನಿರ್ಧಾರ ತಾಳಿ. ಆತುರ ಬೇಡ.

ಮಕರ
ಖಾಸಗಿ ಬದುಕಿಗೆ ಗಮನ ಹರಿಸದಷ್ಟು ವೃತ್ತಿಕಾರ್ಯದಲ್ಲಿ ಮುಳುಗುತ್ತೀರಿ. ಬಂಧುಗಳ ಜತೆ ಸಂಬಂಧದಲ್ಲಿ ಇರಿಸುಮುರಿಸು.

ಕುಂಭ
ವೈಯಕ್ತಿಕ ಕಾರ್ಯದಲ್ಲಿ ಸಫಲತೆ.  ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಉದ್ದೇಶ ಈಡೇರಿಕೆ. ಆದರೆ ಭಾವನಾತ್ಮಕವಾಗಿ ನಿಮಗೆ ನೋವು ಉಂಟಾದೀತು.

ಮೀನ
ಆರೋಗ್ಯಕ್ಕೆ ಸಂಬಂಧಿಸಿ ಚಿಂತೆ ಮೂಡಿದರೂ  ಬಳಿಕ ಎಲ್ಲವೂ ನಿರಾಳ. ಆತಂಕ ನಿವಾರಣೆ. ಆಪ್ತೇಷ್ಟರ ಜತೆ ಕಾಲ ಕಳೆಯುವ ಅವಕಾಶ.  ವೆಚ್ಚ ಹೆಚ್ಚಳ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!