ಮೇಷ
ಆಪ್ತೇಷ್ಟರ ಬೇಡಿಕೆಗಳನ್ನು ಈಡೇರಿಸುವ ಒತ್ತಡಕ್ಕೆ ಸಿಲುಕುವಿರಿ. ಆರ್ಥಿಕ ಹೊರೆ ಹೆಚ್ಚಬಹುದು. ಆದರೆ ಮನಸ್ಸಿಗೆ ಹಿತ. ಕೌಟುಂಬಿಕ ಸೌಹಾರ್ದ ಹೆಚ್ಚಳ.
ವೃಷಭ
ನಿಮ್ಮ ನಿರೀಕ್ಷೆಗಳು ಈಡೇರುವ ದಿನ. ನಿಮ್ಮ ಅಭೀಷ್ಟದ ವಸ್ತು ಖರೀದಿಸುವ ಆಸೆ ಈಡೇರಲಿದೆ. ಕೌಟುಂಬಿಕ ಶಾಂತಿ. ಎಲ್ಲರ ಸಹಕಾರ.
ಮಿಥುನ
ಆರ್ಥಿಕವಾಗಿ ಉತ್ತಮ ದಿನ. ಜತೆಗೇ ಖರ್ಚೂ ಹೆಚ್ಚಲಿದೆ. ಕೆಲ ವಿಚಾರಗಳಲ್ಲಿ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳ ಬೇಕಾಗುತ್ತದೆ.
ಕಟಕ
ಕುಟುಂಬಸ್ಥರು ಮತ್ತು ಸ್ನೇಹಿತರು ನಿಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆ ಈಡೇರಿಸಲು ನೀವು ಕಠಿಣ ಶ್ರಮ ಪಡಬೇಕಾಗುವುದು.
ಸಿಂಹ
ಪ್ರಮುಖ ವಿಷಯದಲ್ಲಿ ಹಠಾತ್ ನಿರ್ಧಾರ ತಾಳಬೇಕಾದ ಪ್ರಸಂಗ. ಕಠಿಣ ನಿಲುವು ತಾಳಲು ಹಿಂಜರಿಯದಿರಿ. ನಿಮ್ಮ ಮತ್ತು ಆಪ್ತರ ಹಿತಾಸಕ್ತಿ ಕಾಯ್ದುಕೊಳ್ಳಿ.
ಕನ್ಯಾ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಹಿತವಲ್ಲದ ಆಹಾರ ಸೇವಿಸದಿರಿ. ಕೌಟುಂಬಿಕ ಸ್ವಾಸ್ಥ್ಯಕ್ಕೂ ಆದ್ಯತೆ ಕೊಡಿ. ಇಂದು ಖರ್ಚು ಅಧಿಕವಾದೀತು
ತುಲಾ
ನಿಮ್ಮ ಪಾಲಿಗೆ ವಿಶೇಷವೆನಿಸುವ ದಿನ. ಮಹತ್ತರ ಬೆಳವಣಿಗೆ ಸಂಭವಿಸಬಹುದು. ಕೌಟುಂಬಿಕ ಬಿಕ್ಕಟ್ಟು ನಿಮಗೆ ಪೂರಕವಾಗಿ ಪರಿಹಾರ ಕಾಣುವುದು.
ವೃಶ್ಚಿಕ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆಪ್ತರೊಬ್ಬರು ತಮ್ಮ ವರ್ತನೆಯಿಂದ ಮನಸ್ಸಿಗೆ ನೋವು ನೀಡುತ್ತಾರೆ. ಅವರ ಜತೆ ಹೊಂದಾಣಿಕೆ ಸಾಧಿಸಿರಿ.
ಧನು
ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರುವಂತಹ ಬೆಳವಣಿಗೆ. ನೀವು ವಿವೇಚನೆಯಿಂದ ಹೆಜ್ಜೆ ಇಡಬೇಕು. ಆತುರದ ನಡೆ ಸಲ್ಲದು.
ಮಕರ
ಕುಟುಂಬದ ಸದಸ್ಯರ ಸಣ್ಣಪುಟ್ಟ ವಾಗ್ವಾದಗಳಿಗೆ ಹೆಚ್ಚು ಪ್ರಾಮುಖ್ಯ ಕೊಡಬೇಡಿ. ಉದ್ವಿಗ್ನ ಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿ.
ಕುಂಭ
ಅಪೂರ್ಣವಾಗಿ ಉಳಿದಿದ್ದ ಮುಖ್ಯ ಕಾರ್‍ಯ ಪೂರ್ಣಗೊಳಿಸುವ ಅವಕಾಶ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ. ಧನಲಾಭವಿದೆ.
ಮೀನ
ಬಂಧುಗಳ ಜತೆ ಉತ್ತಮ ಸಮನ್ವಯ. ಇದರಿಂದಾಗಿ ಭಿನ್ನಮತ ನಿವಾರಣೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯ. ಆರ್ಥಿಕ ಕೊರತೆ ದೂರ.