ದಿನಭವಿಷ್ಯ: ಆರ್ಥಿಕವಾಗಿ ಈ ರಾಶಿಯವರಿಗೆ ಒಳಿತಾಗಲಿದೆ

ಮೇಷ
ಇತರರ ಸಲಹೆ ಸಾರಾಸಗಾಟಾಗಿ ತಿರಸ್ಕರಿಸಬೇಡಿ. ಕೆಲವೊಮ್ಮೆ ಅದರಿಂದ ಒಳಿತಾದೀತು. ಆರೋಗ್ಯ ಸುಸ್ಥಿರ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ವೃಷಭ
ವೃತ್ತಿಯಲ್ಲಿ ತೃಪ್ತಿಕರ ಕಾರ್ಯ ನಿರ್ವಹಣೆ. ಕೌಟುಂಬಿಕ ವಿಚಾರ ವೊಂದು ಅಶಾಂತಿಗೆ ಕಾರಣವಾಗಿದ್ದರೂ ಬೇಗನೆ ಇತ್ಯರ್ಥ ಕಾಣುವುದು.

ಮಿಥುನ
ಉತ್ಸಾಹದ ದಿನ. ನಿಮ್ಮ ಸಾಧನೆಗಾಗಿ ಕೆಲವರ ಮೆಚ್ಚುಗೆಗೆ ಕಾಯುತ್ತೀರಿ. ಅದು ದೊರಕಲಿಲ್ಲವೆಂದಾದರೆ ನಿರಾಶೆ ಬೇಡ. ಬಂಧು ಸಹಕಾರ.

ಕಟಕ
ಕೆಲವರ ಜತೆ ವಾಗ್ವಾದದಲ್ಲಿ ತೊಡಗುವ ಸಾಧ್ಯತೆಯಿದೆ. ನಿಮ್ಮ ಕೋಪತಾಪ ನಿಯಂತ್ರಿಸಬೇಕು. ಖರ್ಚಿನಲ್ಲಿ ಹೆಚ್ಚಳ.

ಸಿಂಹ
ನಿಮ್ಮ ಪ್ರಯತ್ನದ ಕುರಿತಾದ ಸೋಲು ಗೆಲುವಿನ ಕಾಯುವಿಕೆಗೆ ಇಂದು ಅಂತ್ಯ ಬೀಳಲಿದೆ. ನಿಮಗೆ ಪೂರಕ ಫಲಿತಾಂಶ ದೊರಕಲಿದೆ.

ಕನ್ಯಾ
ವೃತ್ತಿಯಲ್ಲಿ ಸಹೋದ್ಯೋಗಿಗಳ ಅಸಹಕಾರ. ಮನೆಯಲ್ಲೂ ಹೊಂದಾಣಿಕೆಯ ಕೊರತೆ. ಒಟ್ಟಿನಲ್ಲಿ ನಿರುತ್ಸಾಹದ ದಿನ.

ತುಲಾ
ಸಣ್ಣ ವಿಷಯಗಳಿಗೆ ತಲೆಕೆಡಿಸಿಕೊಳ್ಳುವಿರಿ. ಅದರಿಂದ ನಿಮ್ಮ ಮುಖ್ಯ ಕಾರ್ಯಕ್ಕೂ ಅಡ್ಡಿ ಉಂಟಾಗಲಿದೆ. ಸಮಚಿತ್ತತೆ ಬೆಳೆಸಿಕೊಳ್ಳಿರಿ.

ವೃಶ್ಚಿಕ
ಕೆಲಸದಲ್ಲಿ ತಪ್ಪು ಉಂಟಾದೀತು. ನಿಮ್ಮ ಸಾಮರ್ಥ್ಯದ ಪೂರ್ಣ ಉಪಯೋಗ ಪಡೆಯಲು ವಿಫಲರಾಗುವಿರಿ. ಆಪ್ತರಿಂದ ಅಸಹಕಾರ.

ಧನು
ವೃತ್ತಿಯಲ್ಲೂ, ಕೌಟುಂಬಿಕ ವಿಚಾರದಲ್ಲೂ ಹೆಚ್ಚು ಹೊಣೆಗಾರಿಕೆ. ಕೆಲವರ ಅಸಹಕಾರ ಅಸಹನೆ ಮೂಡಿಸಬಹುದು. ಹೊಂದಾಣಿಕೆ ಮುಖ್ಯ.

ಮಕರ
ಕೆಲಸದಲ್ಲಿ ಏಕಾಗ್ರತೆ ಇರಲಿ. ಮನಸ್ಸು ಅತ್ತಿತ್ತ ಚಲಿಸದಂತೆ ನೋಡಿಕೊಳ್ಳಿ. ಕೌಟುಂಬಿಕ ಸಂಬಂಧ ಸದೃಢ. ಭಿನ್ನಮತ ನಿವಾರಣೆ.

ಕುಂಭ
ಹಲವಾರು ವಿಷಯ ಮನಸ್ಸನ್ನು ಕಾಡುತ್ತದೆ. ಅದರಿಂದಾಗಿ ನಿಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಲು ಕಷ್ಟ ಪಡುವಿರಿ. ಧ್ಯಾನ ಸಹಕಾರಿಯಾದೀತು.

ಮೀನ
ಪ್ರತಿಯೊಂದು ಕೆಲಸವನ್ನೂ ಅತಿಯಾಗಿ ಮಾಡುತ್ತೀರಿ. ಅದರಿಂದ ಟೀಕೆಗೆ ಒಳಗಾಗುವಿರಿ. ಸಣ್ಣ ವಿಷಯವನ್ನು ಗಂಭೀರವಾಗಿ ಪರಿಗಣಿಸುವಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!