ದಿನಭವಿಷ್ಯ : ಅನಾರೋಗ್ಯದಿಂದ ಮುಕ್ತಿ, ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆ

ಮೇಷ
ನಿಮಗೆ ಸಂಬಂಧಿಸಿದ ಮುಖ್ಯ ವಿಚಾರದಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ನಿಲುವು ತಾಳಬೇಕು. ಇಲ್ಲವಾದರೆ ನಿಮಗೆ ಹಿನ್ನಡೆ ಸಂಭವ. ಕೌಟುಂಬಿಕ ಅಸಹಕಾರ.

ವೃಷಭ
ನಿಮ್ಮ ಮನಸ್ಸು ಚಂಚಲ. ಕೆಲವಾರು ವಿಷಯ ಮನಸ್ಸಿನಲ್ಲಿ ಸುಳಿದಾಟ. ಆದರೆ ಗುರಿಯಿಂದ ವಿಚಲಿತರಾಗದಿರಿ. ಅದನ್ನು ಸಾಧಿಸಲು ಸರ್ವಪ್ರಯತ್ನ ಮಾಡಿ.

ಮಿಥುನ
ಭಾವನಾತ್ಮಕ ವಿಷಯವೊಂದು ಮನಸ್ಸಿನಲ್ಲಿ ದ್ವಂದ್ವ ಹುಟ್ಟಿಸುತ್ತದೆ. ಸರಿಯಾದ ನಿರ್ಧಾರ  ತಾಳಲಾಗದೆ ತೊಳಲಾಟ.

ಕಟಕ
ಸಮಾನಮನಸ್ಕರ ಜತೆ ಸ್ನೇಹ ವೃದ್ಧಿ. ಯಾವುದೋ ವಿಚಾರದಲ್ಲಿ ನಿಮ್ಮ ನಂಬಿಕೆ ಇನ್ನಷ್ಟು ಬಲಗೊಳ್ಳುವುದು. ದೈವಭಕ್ತಿ ಹೆಚ್ಚಳ.

ಸಿಂಹ
ಕೌಟುಂಬಿಕವಾಗಿ ಶುಭಸುದ್ದಿಗೆ ಕಾಯುತ್ತಿದ್ದರೆ ಅದು ಇಂದು ಸಿಗಲಿದೆ. ವೃತ್ತಿಯಲ್ಲಿ ಮುನ್ನಡೆ. ಸಮಸ್ಯೆಗಳು ಪರಿಹಾರ, ಆರ್ಥಿಕತೆ ಸದೃಢ.

ಕನ್ಯಾ
ಕೆಲವು ಸಮಸ್ಯೆ ಕಾಡಿದರೂ ಅದಕ್ಕೆ  ಸೂಕ್ತ ಪರಿಹಾರವೂ ನಿಮ್ಮಲ್ಲಿದೆ. ಅದನ್ನು ದೃಢವಾಗಿ ಕಾರ್ಯರೂಪಕ್ಕೆ ಇಳಿಸಿ.  ಹಿಂಜರಿಕೆ ಬೇಡ.

ತುಲಾ
ಖಾಸಗಿ ಸಮಸ್ಯೆಗಳ ಕಾರಣದಿಂದಾಗಿ ಮಾನಸಿಕ ಉದ್ವಿಗ್ನತೆ. ಕೆಲವರ ವರ್ತನೆ ಅಸಹನೀಯ ಎನಿಸಬಹುದು.  ತಾಳ್ಮೆ ಕಳಕೊಳ್ಳದಿರಿ.

ವೃಶ್ಚಿಕ
ಕೌಟುಂಬಿಕವಾಗಿ ಭಾವುಕ ಸನ್ನಿವೇಶ ಮನಸ್ಸು ಕಲಕಬಹುದು. ವಿವೇಚನೆಯಿಂದ ನಡಕೊಳ್ಳಿ. ಇತರರ ಮನಸ್ಸು ನೋಯಿಸಲು ಹೋಗದಿರಿ.

ಧನು
ಕಠಿಣವಾದ ಸವಾಲು ಎದುರಿಸುವಿರಿ. ದಿನದ ಆರಂಭದಲ್ಲಿ ಒತ್ತಡ ಅಧಿಕ.  ದಿನದಂತ್ಯಕ್ಕೆ ಎಲ್ಲವೂ ಸರಳವಾಗಿ ಕೊನೆಗೊಳ್ಳುವುದು. ಸೂಕ್ತ ಸಹಕಾರ ಲಭ್ಯ.

ಮಕರ
ನಿಮ್ಮ ಬದುಕಿನಲ್ಲಿ  ಮುಖ್ಯವಾದ ಬೆಳವಣಿಗೆ ಸಂಭವಿಸಬಹುದು. ಅದನ್ನು ನಿಮಗೆ ಪೂರಕವಾಗಿ ಬದಲಿಸಿಕೊಳ್ಳಿ. ಸೂಕ್ತ ನೆರವು ಲಭ್ಯ.

ಕುಂಭ
ಕೌಟುಂಬಿಕ ಭಿನ್ನಮತ ಉಂಟಾದೀತು.ಅದಕ್ಕೆ ಇತರರನ್ನು ಮಾತ್ರ ದೂರಬೇಡಿ. ನಿಮ್ಮ ವರ್ತನೆಯೂ ಅದಕ್ಕೆ ಕಾರಣವಾಗುವುದು. ಸಂಯಮ ವಹಿಸಿ.

ಮೀನ
ಯಾವುದೇ ಸೋಲು, ಹಿನ್ನಡೆ ನಿಮ್ಮನ್ನು ಇಂದು ಬಾಧಿಸದು. ಆದರೆ ಏಕತಾನತೆ ಕಾಡಬಹುದು. ವಿಭಿನ್ನ ಕಾರ್ಯದಲ್ಲಿ ತೊಡಗಲು ಯತ್ನಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!