ಬೀದರ್ ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

ಹೊಸದಿಗಂತ ವರದಿ, ಬೀದರ್:

ಬೀದರ್ ನ ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ಅವರು ಬುಧವಾರ ತಮ್ಮ ನಿಧನ ಹೊಂದಿದ್ದು, ಅವರಿಗೆ ೮೮ ವಯಸ್ಸಾಗಿತ್ತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ರಾಷ್ಟ್ರಪ್ರೇಮದಿಂದ ಖ್ಯಾತಿ ಪಡೆದಿದ್ದ ಧೀಮಂತ ನಾಯಕ. ನಗರಸಭೆ ಅಧ್ಯಕ್ಷನಾಗಿ, ಗಾಂಧಿಗಂಜ ವ್ಯಾಪಾರಿ ಸಂಘದ ಅಧ್ಯಕ್ಷನಾಗಿ ಬಿಜೆಪಿ ಪಕ್ಷದ ಶಾಸಕನಾಗಿ ದುಡಿದವರು.

ಬೀದರ್ ಜಿಲ್ಲೆಯ ಕಟ್ಟರ ಹಿಂದು ವಾದಿ ಎಂದು ಕೂಡ ಇವರನ್ನು ಅನುಯಾಯಿಗಳು ಕರೆಯುತ್ತಿದ್ದರು. ಇವರು ಧರ್ಮಪತ್ನಿ, ಮೂವರು ಹೆಣ್ಣುಮಕ್ಕಳು, ಓರ್ವ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಹಾಗೂ ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಶಾಸಕ ರಮೇಶ ಕುಮಾರ್ ಪಾಂಡೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಣ್ಣನಂತಿದ್ದ ಪಾಂಡೆ ಅವರು ನಿಧನದಿಂದ ವೈಯಕ್ತಿಕವಾಗಿ ರತ್ನ ಕಳೆದುಕೊಂಡತಾಗಿದೆ ಅವರು ಇಲ್ಲದ ಸಂಗತಿ ಅತಿ ದುಃಖ ತಂದಿದೆ, ಅವರು ಆತ್ಮಕ್ಕೆ ಪರಮಾತ್ಮ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!