ದಿನಭವಿಷ್ಯ : ಅನಾರೋಗ್ಯದಿಂದ ಮುಕ್ತಿ, ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆ

ಮೇಷ
ಇಂದು ಸಾಧಿಸಲು ಹೊರಡುವ ಕಾರ್ಯದಲ್ಲಿ ಆರಂಭದಿಂದಲೇ ವಿಘ್ನ ಕಾಣುವಿರಿ. ಕೆಲವರ ಅಸಹಕಾರ ಎದುರಿಸುವಿರಿ.

ವೃಷಭ
ಕಳೆದು ಹೋದುದಕ್ಕೆ ಚಿಂತಿಸಬೇಡಿ.  ಕೌಟುಂಬಿಕ ಬದ್ಧತೆ ಪೂರೈಸಬೇಕಾದ ಒತ್ತಡ.  ಮಾತು ಹದ ತಪ್ಪದಂತೆ ನೋಡಿಕೊಳ್ಳಿ. ವಾಗ್ವಾದಕ್ಕೆ ಇಳಿಯದಿರಿ.

ಮಿಥುನ
ಕೆಲಸದ ಒತ್ತಡವು ಇಂದು ನಿಮ್ಮ ದಿನ ಹಾಳು ಮಾಡಬಹುದು. ಬಯಸಿದ ಕಾರ್ಯ ನೆರವೇರದೆ ಅತೃಪ್ತಿ. ಆತ್ಮೀಯರ ಒಡನಾಟ ತಪ್ಪಬಹುದು.

ಕಟಕ
ಯಶಸ್ಸು ಮತ್ತು ಅದೃಷ್ಟ ನಿಮ್ಮನ್ನು ಅರಸಿ ಬರಲಿದೆ. ಸಣ್ಣಪುಟ್ಟ ಕಿರಿಕಿರಿ ಬಾಧಿಸಿದರೂ ಅದನ್ನು ನಿಭಾಯಿಸುವಿರಿ. ಹಳೆ ಸ್ನೇಹಿತರ ಭೇಟಿ.

ಸಿಂಹ
ಕಳೆದ ಕೆಲವು ದಿನಗಳ ಚಿಂತೆಯೊಂದು ಇಂದು ಪರಿಹಾರ ಕಾಣುವುದು. ಆತ್ಮೀಯರ ಸಂಗದಲ್ಲಿ ಸಂತೋಷದಿಂದ ಕಳೆಯುವಿರಿ. ಆರ್ಥಿಕ ಉನ್ನತಿ.

ಕನ್ಯಾ
ಸಣ್ಣ ಸಮಸ್ಯೆಯೊಂದು ಸದಾಕಾಲ ಮನಸ್ಸು ಕೊರೆಯುತ್ತದೆ. ಪರಿಹಾರಕ್ಕೆ ಹಲವಾರು ಅಡ್ಡಿಗಳು. ಕುಟುಂಬಸ್ಥರ ಅಸಹಕಾರ ಎದುರಿಸುವಿರಿ.

ತುಲಾ
ನಿಮ್ಮನ್ನು ಕಡೆಗಣಿಸುವ ವ್ಯಕ್ತಿಯ ಕುರಿತಂತೆ  ಭಾವುಕತೆಯಿಂದ ಚಿಂತಿಸದಿರಿ. ಅವರನ್ನು ಬಿಟ್ಟು ಬದುಕಲ್ಲಿ ಮುಂದೆ ಸಾಗಲು ಯತ್ನಿಸಿರಿ.

ವೃಶ್ಚಿಕ
ಉಪಯೋಗಕ್ಕೆ ಬಾರದ ಕೆಲಸದಲ್ಲಿ ತೊಡಗದಿರಿ. ನಿಮ್ಮ ಮನಸ್ಸಿಗೆ ಕೆಲವರಿಂದ ನೋವು ಉಂಟಾದೀತು. ಅದನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ.

ಧನು
ನಿಮ್ಮ ಗುರಿ ಇಂದು ಸಾಧಿಸಲ್ಪಡಲಿದೆ. ನಿಮ್ಮ ಯಶಸ್ಸನ್ನು ಎಲ್ಲರೂ ಮೆಚ್ಚುವರು. ಕೌಟುಂಬಿಕ ಭಿನ್ನಮತ ಸೌಹಾರ್ದದಿಂದ ಪರಿಹರಿಸಿಕೊಳ್ಳಿ.

ಮಕರ
ನಿಮ್ಮ ಚಿಂತನೆ, ಭಾವನೆಗಳಿಗೆ ಮನ್ನಣೆ ದೊರಕುವುದು. ಹಾಗಾಗಿ ನಿಮ್ಮ ಅಭಿಪ್ರಾಯ ವ್ಯಕ್ತ ಮಾಡಲು ಹಿಂಜರಿಕೆ ತೋರಬೇಕಾಗಿಲ್ಲ.

ಕುಂಭ
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಕೆಲವು ಕಿರಿಕಿರಿ ಉಂಟಾದರೂ ಅದು ಸುಲಭದಲ್ಲೆ ಪರಿಹಾರ ಕಾಣುವುದು. ಬಿಕ್ಕಟ್ಟೊಂದು ನಿವಾರಣೆ ಆಗುವುದು.

ಮೀನ
ನಿಮ್ಮ ಪಾಲಿಗೆ ತೃಪ್ತಿಕರ ದಿನ. ಕೆಲದಿನಗಳ  ಅಸಮಾಧಾನ ನಿವಾರಣೆ. ಬಂಧುಗಳಿಂದ ಉತ್ತಮ ಸಹಕಾರ. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!