ದಿನಭವಿಷ್ಯ: ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ

ಮೇಷ
ಉತ್ಸಾಹದ ದಿನ. ಆದರೆ ನಿಮ್ಮ ಯೋಜನೆ ಸರಿಯಾಗಿ ಕಾರ್ಯಗತ ಆಗಲಾರದು. ಹೊಟ್ಟೆ ಅಥವಾ ಬೆನ್ನು ನೋವು ಕಾಡುತ್ತಿದ್ದರೆ ಇಂದು ನಿರಾಳತೆ ಸಿಗಲಿದೆ.

ವೃಷಭ
ನಿರ್ಧಾರದಲ್ಲಿ ಇಂದು ಹೆಚ್ಚು ದೃಢತೆ ಪ್ರದರ್ಶಿಸುವಿರಿ. ಗೊಂದಲ ತ್ಯಜಿಸುವಿರಿ. ಇದು ನಿಮ್ಮ ಕಾರ್ಯ ಸಫಲತೆಗೆ ನೆರವು ನೀಡಲಿದೆ.

ಮಿಥುನ
ಬಿಡುವಿಲ್ಲದ ದಿನ. ಮನೆ ಮತ್ತು ಕುಟುಂಬದ ವ್ಯವಹಾರ ನಿಮ್ಮ ಗಮನ ಬೇರೆಡೆ ಹೋಗಲು ಬಿಡಲಾರದು. ಕುಟಂಬ ಸದಸ್ಯರ ಜತೆ ವಾಗ್ವಾದ ನಡೆಸದಿರಿ.

ಕಟಕ
ವೃತ್ತಿಯಲ್ಲಿ ಯಶಸ್ವಿ ದಿನ. ನಿಮ್ಮನ್ನು ಟೀಕಿಸುವವರಿಗೆ ನಿಮ್ಮ ಸಾಮರ್ಥ್ಯ ತೋರಿಸಿ ಕೊಡುವಿರಿ. ಆರ್ಥಿಕ ಲಾಭ. ಕೌಟುಂಬಿಕ ಸಮಾಧಾನ.

ಸಿಂಹ
ಹಲವು ಬೆಳವಣಿಗೆ ಸಂಭವಿಸಲಿದೆ. ವೃತ್ತಿಯಲ್ಲಿ ಪ್ರಗತಿ. ಉದ್ಯೋಗದಲ್ಲಿ  ಉನ್ನತಿ. ಕೌಟುಂಬಿಕ ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳಿ.

ಕನ್ಯಾ
ವೃತ್ತಿಯ ಒತ್ತಡವು ಮನೆಯ ವ್ಯವಹಾರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಬಂಧುಗಳ ಜತೆ ಕಲಹವಾದೀತು.

ತುಲಾ
ಎಲ್ಲಾ ಸಮಯದಲ್ಲೂ ನಿಮ್ಮ ಅಣತಿಯಂತೆ ನಡೆಯಲಾರದು ಎಂಬ ಕಹಿ ಸತ್ಯ ಅರಿಯುವಿರಿ. ಹೊಂದಾಣಿಕೆಯ ಬದುಕು ಕೂಡ ಮುಖ್ಯ ಎಂದು ಅರಿಯಿರಿ.

ವೃಶ್ಚಿಕ
ಅದೃಷ್ಟದ ದಿನ. ಉದ್ಯೋಗದಲ್ಲಿ  ಉನ್ನತಿ. ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಆರೋಗ್ಯ ಸಂಬಂಧಿ ಚಿಂತೆ ಮಾಯ.

ಧನು
ನಿಮಗೆ ಉಲ್ಲಾಸ, ಉತ್ಸಾಹ ತುಂಬುವ ಬೆಳವಣಿಗೆ ಸಂಭವಿಸುವುದು. ಬಹುಕಾಲದಿಂದ ಆಶಿಸುತ್ತಿದ್ದ ಕಾರ್ಯ ಕೈಗೂಡುವುದು.

ಮಕರ
ಎಲ್ಲ ವ್ಯವಹಾರ ನೀವು ಆಶಿಸಿದಂತೆ ಸಾಗುವುದು. ಆದರೆ ಇದು ನಿಮ್ಮ ಮೇಲೆ ಸಾಕಷ್ಟು ಮಾನಸಿಕ ಒತ್ತಡವನ್ನೂ ಉಂಟು ಮಾಡಲಿದೆ. ಧ್ಯಾನ ಸಹಕಾರಿ.

ಕುಂಭ
ಉದಾಸೀನತೆ ಬಿಟ್ಟುಬಿಡಿ. ತುಸು ಕ್ರಿಯಾಶೀಲರಾಗಿ. ಬಾಕಿ ಇರುವ ಕಾರ್ಯ ಮುಗಿಸಿರಿ. ಶೇರು ಹೂಡಿಕೆಯಲ್ಲಿ ಲಾಭ ಸಿಗಲಿದೆ. ಕೌಟುಂಬಿಕ ಒತ್ತಡ ನಿವಾರಣೆ.

ಮೀನ
ಉದ್ದೇಶ ಸಫಲತೆ. ಧನ ಲಾಭ. ಹೆಚ್ಚು ಬದ್ಧತೆಯಿಂದ ಇಂದು ಕಾರ್ಯ ಎಸಗುವಿರಿ. ಆರೋಗ್ಯ ಸಮಸ್ಯೆ ನಿವಾರಣೆ. ಮಾನಸಿಕ ನಿರಾಳತೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!