ಮೇಷ
ವೃತ್ತಿಅಥವಾ ವಾಸ ಸ್ಥಳದಲ್ಲಿ ಬದಲಾವಣೆ ನಿಮ್ಮ ಮೇಲೆ ಪರಿಣಾಮ ಬೀರುವುದು. ಅದು ಮಾನಸಿಕ ಬೇಗುದಿಗೂ ಕಾರಣವಾದೀತು.
ವೃಷಭ
ಕಷ್ಟದ ದಿನ. ವ್ಯವಹಾರದಲ್ಲಿ ಅಪಯಶಸ್ಸು. ಮಾನಸಿಕ ತೊಳಲಾಟ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಖರ್ಚು ಮಾಡಿರಿ.
ಮಿಥುನ
ವೃತ್ತಿ ಕ್ಷೇತ್ರದಲ್ಲಿ ವದಂತಿಗಳಿಂದ ದೂರವಿರಿ. ಅದರಿಂದ ನಿಮಗೇ ಹಾನಿ. ಮನೆಯ ಸದಸ್ಯರ ಜತೆ ಸಹನೆಯಿಂದ ವರ್ತಿಸಿರಿ. ಸಂಘರ್ಷ ಬೇಡ.
ಕಟಕ
ಗೂಡಿನಿಂದ ಹೊರಬನ್ನಿ. ಹೊರಜಗತ್ತಿನ ಜತೆ ಹೆಚ್ಚು ವ್ಯವಹರಿಸಿ. ಅಂತರ್ಮುಖಿಯಾಗಿ ಬೇಸರಿಸುತ್ತಾ ಕೂರಬೇಡಿ. ಕೌಟುಂಬಿಕ ಸಹಕಾರ.
ಸಿಂಹ
ಆರೋಗ್ಯ ಸಮಸ್ಯೆ ಸಂಭವ. ಆರೋಗ್ಯಕರ ಆಹಾರವನ್ನೆ ಸೇವಿಸಿರಿ. ಕೌಟುಂಬಿಕ ಪರಿಸರ ಸೌಹಾರ್ದದಾಯಕ. ವೃತ್ತಿಯಲ್ಲಿ ಯಶಸ್ಸು.
ಕನ್ಯಾ
ದೊಡ್ಡ ಹೊಣೆಗಾರಿಕೆ ಹೇರಲ್ಪಡುವುದು. ಅದನ್ನು ನಿಭಾಯಿಸು ವುದು ಅನಿವಾರ್ಯ. ಮಾನಸಿಕವಾಗಿ ಕುಗ್ಗುವಿರಿ. ಸಹಕಾರ ಪಡೆಯಿರಿ.
ತುಲಾ
ನಯವಂಚಕರ ಕುರಿತು ಎಚ್ಚರದಿಂದಿರಿ. ನಯವಾಗಿ ಮಾತನಾಡಿ ನಿಮ್ಮ ಬೆನ್ನ ಹಿಂದೆ ಇರಿಯುತ್ತಾರೆ. ಧನವ್ಯಯ ಹೆಚ್ಚಲಿದೆ.
ವೃಶ್ಚಿಕ
ಅತಿ ಭಾವುಕತೆ ದೂರವಿಟ್ಟು ವರ್ತಿಸಿ. ಇಲ್ಲವಾದರೆ ಮಾನಸಿಕ ನೆಮ್ಮದಿ ಹಾಳು. ಆಪ್ತ ಸಂಬಂಧದಲ್ಲಿ ಬಿರುಕು ಸಂಭವ.
ಧನು
ವೃತ್ತಿ ಕ್ಷೇತ್ರದಲ್ಲಿ ಜಗಳದಿಂದ ದೂರವಿರಿ. ನಿಮ್ಮ ಸಾಧನೆಗೆ ನೀವೇ ಮುಂದಾಗಬೇಕು. ಇತರರನ್ನು ಅವಲಂಬಿಸದಿರಿ.
ಮಕರ
ಕ್ಲಿಷ್ಟಕರ ವಿಚಾರದಲ್ಲಿ ನಿಮ್ಮ ಅಂತಃಸಾಕ್ಷಿಯ ಪ್ರಕಾರ ನಡಕೊಳ್ಳಿ. ಅಂತಿಮವಾಗಿ ನಿಮಗೆ ಅದರಿಂದ ಒಳಿತೇ ಆಗುವುದು.
ಕುಂಭ
ಮಾತುಕತೆಯಿಂದ ವೈಮನಸ್ಸು ಪರಿಹಾರ ಸುಲಭ. ಇದನ್ನು ನೀವು ಅರಿಯುವುದು ಒಳಿತು. ಸಂಘರ್ಷದ ನೀತಿ ಮುಂದುವರಿಸದಿರಿ.
ಮೀನ
ಅನಿರೀಕ್ಷಿತ ಖರ್ಚು ಒದಗಲಿದೆ. ಒಂದು ಸಮಸ್ಯೆ ಮುಗಿದೊಡನೆ ಮತ್ತೊಂದು ಸವಾಲು ಎದುರಾದೀತು. ಸಹನೆಯಿಂದ ವರ್ತಿಸಿ.