ಮೇಷ
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲವಲ್ಲ. ತುಸು ಸಮಯ ಕಾಯುವುದು ಒಳಿತು. ಕೆಲವರ ವಿರೋಧ ಎದುರಿಸುವಿರಿ. ಕೌಟುಂಬಿಕ ಉದ್ವಿಗ್ನತೆ.
ವೃಷಭ
ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿ. ಗೊಂದಲದಿಂದ ಕೆಲಸ ಕೆಡಿಸದಿರಿ. ಅನ್ಯರ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿ. ಕೋಪತಾಪ ಬಿಟ್ಟುಬಿಡಿ.
ಮಿಥುನ
ಕೌಟುಂಬಿಕ ಮುನಿಸು ನಿವಾರಿಸಲು ಆದ್ಯತೆ ಕೊಡಿ. ನಿಮ್ಮಿಂದಲೇ ಹೊಂದಾಣಿಕೆಯ ನಡೆ ಶುರುವಾಗಲಿ. ಅನ್ಯರ ಚಾಡಿ ಮಾತು ಕೇಳಿ ಕೆಡಬೇಡಿ.
ಕಟಕ
ಸಣ್ಣ ವಿಷಯಗಳಿಗೆ ಹೆಚ್ಚು ಚಿಂತೆ ಮಾಡಬೇಡಿ. ಕಾಡುವ ಸಮಸ್ಯೆಗಳು ತಾವಾಗಿ ಪರಿಹಾರ ಕಾಣುತ್ತವೆ. ಸೂಕ್ತ ಸಹಕಾರವೂ ನಿಮಗೆ ಸಿಗುತ್ತದೆ.
ಸಿಂಹ
ಜೀವನಶೈಲಿಯಲ್ಲಿ
ತುಸು ಬದಲಾವಣೆ ಅವಶ್ಯ. ಸಣ್ಣ ವಿಷಯಕ್ಕೆ ಅತಿಯಾದ ಪ್ರತಿಕ್ರಿಯೆ ತೋರಬೇಡಿ. ಸಮಾಧಾನದಿಂದ ಯೋಚಿಸಿ ನಡೆಯಿರಿ.
ಕನ್ಯಾ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ನೆಮ್ಮದಿ ಕಲಕುವ ಸಮಸ್ಯೆ ಪರಿಹಾರ.
ತುಲಾ
ಕುಟುಂಬ ಸದಸ್ಯರ ನಿರ್ಲಕ್ಷ್ಯ ಬೇಡ. ಅವರ ಆಗುಹೋಗಿಗೂ ಗಮನ ಕೊಡಿ. ವೃತ್ತಿ ಕಾರ್ಯವನ್ನು ತುಸು ಬದಿಗೆ ಸರಿಸಿದರೂ ಪರವಾಗಿಲ್ಲ.
ವೃಶ್ಚಿಕ
ಪ್ರಮುಖ ಕಾರ್ಯಕ್ಕೆ ಕುಟುಂಬಸ್ಥರ ಬೆಂಬಲ, ಸಹಕಾರ. ಆತ್ಮೀಯ ವ್ಯಕ್ತಿಯೋರ್ವರ ಸಂಪರ್ಕ ಹೆಚ್ಚು ಕುಶಿ ನೀಡುತ್ತದೆ. ಆಪ್ತರ ಜತೆ ಭಾವನಾತ್ಮಕ ಬಾಂಧವ್ಯ.
ಧನು
ಅತ್ಯಾಪ್ತರು ನಿಮ್ಮೊಡನೆ ಮುನಿಸಿಕೊಳ್ಳುವರು. ಹೊಂದಾಣಿಕೆ, ಸಾಂತ್ವನ ಮುಖ್ಯವೇ ಹೊರತು ಸಂಘರ್ಷವಲ್ಲ. ಹಣದ ಮುಗ್ಗಟ್ಟು ಚಿಂತೆಗೆ ಕಾರಣವಾದೀತು.
ಮಕರ
ನಿಮ್ಮ ಚಿಂತನೆಯಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಉಂಟಾದೀತು. ಕೆಲವರನ್ನು ಹತ್ತಿರ ಸೆಳೆಯಲು ಇದು ಅವಶ್ಯ.
ಕುಂಭ
ನಿಮ್ಮನ್ನು ದೂರ ಮಾಡಿದವರು ಸಮೀಪವಾಗಲು ಬಯಸುತ್ತಾರೆ. ಅವರಿಗೊಂದು ಅವಕಾಶ ಕೊಡಿ. ಭಿನ್ನಾಭಿಪ್ರಾಯ ಶಮನ ಮಾಡಿಕೊಳ್ಳಿ.
ಮೀನ
ಹಣದ ಮುಗ್ಗಟ್ಟು ಪರಿಹಾರ ಕಾಣುವುದು. ನಿಮ್ಮ ವರ್ತುಲದಿಂದ ಯಾರಾದರೂ ದೂರ ಸರಿದರೆ ಅದು ನಿಮ್ಮ ಒಳ್ಳೆಯದಕ್ಕೆಂದೇ ತಿಳಿಯಿರಿ.