ದಿನಭವಿಷ್ಯ; ಈ ರಾಶಿಗೆ ಒಲಿದು ಬರಲಿದೆ ರಾಜವೈಭೋಗ

ಮೇಷ
ಆಪ್ತರ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ. ಹೊಸ ವ್ಯವಹಾರಕ್ಕೆ ಯೋಚಿಸಿ ಮುನ್ನಡೆಯಿರಿ.ಆರೋಗ್ಯದತ್ತ ಗಮನಹರಿಸಿ.

ವೃಷಭ
ಜಡತ್ವವನ್ನು ಬಿಟ್ಟು ಬಾಕಿ ಉಳಿದ ಕೆಲಸಗಳನ್ನು ಪೂರೈಸುವತ್ತ ಗಮನ ಹರಿಸಿ. ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಇದರಿಂದ ನಿಮಗೇ ಒಳಿತು.

ಮಿಥುನ
ಸಾಮಾಜಿಕ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಸಣ್ಣ ಪುಟ್ಟ ಆರೋಗ ಸಮಸ್ಯೆ ಕಾಡಬಹುದು. ಇತರರ ಮೇಲೆ ರೇಗದಿರಿ.
ತಾಳ್ಮೆ ಇರಲಿ.

ಕಟಕ
ಮನೆಯ  ವಿಚಾರದಲ್ಲಿ ನಿಮ್ಮ ನಿಲುವಿಗೇ ಅಂಟಿ ಕೊಳ್ಳದಿರಿ. ಖರ್ಚು ವೆಚ್ಚ ಹೆಚ್ಚಳ.  ಅಜೀರ್ಣ ಸಮಸ್ಯೆ ಕಾಡಬಹುದು.ಆಹಾರ ಸೇವನೆಯಲ್ಲಿ  ಎಚ್ಚರವಿರಲಿ.

ಸಿಂಹ
ಕುಟುಂಬದಲ್ಲಿ ಭಿನ್ನಮತ. ಪ್ರತಿಕೂಲ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಎಲ್ಲವೂ ಸಹಜವಾಗಿ ಸಾಗುವವು. ಹಣದ ಬಿಕ್ಕಟ್ಟು ಪರಿಹಾರ.

ಕನ್ಯಾ
ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಅನ್ಯರಿಗೆ ಸಹಾಯ ಮಾಡುವ ತರಾತುರಿಯಲ್ಲಿ ದುಡುಕದಿರಿ. ಪುಣ್ಯಕ್ಷೇತ್ರ ದರ್ಶನ.

ತುಲಾ
ಇಂದು ನಿಮಗೆ ಹೊಸ ಅವಕಾಶಗಳು ಕಾದಿವೆ. ಕೆಲಸ ಕಾರ್ಯಗಳಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿ. ಹಿತಮಿತ ಆಹಾರ ಸೇವಿಸಿ. ಕೌಟುಂಬಿಕ ಶಾಂತಿ.

ವೃಶ್ಚಿಕ
ಹೊಸ ಉದ್ಯಮ ಆರಂಭಿಸಲು ಮನ ಮಾಡುವಿರಿ. ಯಶಸ್ಸು ಪ್ರಾಪ್ತಿ. ಹೂಡಿಕೆಯಲ್ಲಿ ಲಾಭ. ಆರೋಗ್ಯದಲ್ಲಿ ಸುಧಾರಣೆ. ಸಂತಸ. ಧನಪ್ರಾಪ್ತಿ.

ಧನು
ತಪ್ಪುಗಳಾಗದಂತೆ ಅಚ್ಚುಕಟ್ಟಾಗಿ ಕಾರ್‍ಯ ನಿರ್ವಹಿಸಿ. ಅನಗತ್ಯ ಖರ್ಚು ಬೇಡ. ಮನೆಯಲ್ಲಿ ನಿಮ್ಮ ಸಹನೆಯನ್ನು ಕಾಯ್ದುಕೊಳ್ಳಿ.

ಮಕರ
ಉದ್ಯಮದಲ್ಲಿ  ಪ್ರಗತಿ.  ಸಾಮಾಜಿಕ ಮನ್ನಣೆ ದೊರಕುವುದು. ಆತ್ಮೀಯ ಸಂಬಂಧಗಳನ್ನು ಉಳಿಸಿಕೊಳ್ಳಿ. ಆರೋಗ್ಯ ಸುಧಾರಣೆ.

ಕುಂಭ
ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಿ.  ಸಮಸ್ಯೆ ಪರಿಹಾರ ಕಾಣುವುದು.ಆರ್ಥಿಕವಾಗಿ ಸಕಾರಾತ್ಮಕ ಬೆಳವಣಿಗೆ. ಚಿಂತೆ ದೂರ, ನೆಮ್ಮದಿ.

ಮೀನ
ವಿವಿಧ ಮೂಲಗಳಿಂದ ಆದಾಯ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ಕೆಲಸದ ಒತ್ತಡದಿಂದ ವಿರಾಮ ಪಡೆಯಲು ಯತ್ನಿಸಿ. ಸಹನೆ ಕಳಕೊಳ್ಳದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!