ದಿನಭವಿಷ್ಯ: ಕೆಲಸದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿ ಸುಧಾರಣೆ

ಮೇಷ
ಖರ್ಚು ಹೆಚ್ಚಳ. ಹಾಗಾಗಿ ದುಬಾರಿ ವಸ್ತು ಖರೀದಿಗೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಗಮನ ಅವಶ್ಯ. ಅದನ್ನು ಕಡೆಗಣಿಸಬೇಡಿ. ಕೌಟುಂಬಿಕ ಸಹಕಾರ.

ವೃಷಭ
ಮನೆಯಲ್ಲಿ ಶಾಂತಿ ಕಾಪಾಡಲು ಗಮನ ಕೊಡಿ. ವಾಗ್ವಾದ, ಅನವಶ್ಯ ಟೀಕೆ ತಪ್ಪಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು.  ಪ್ರೀತಿಯಲ್ಲಿ  ಪೂರಕ ಬೆಳವಣಿಗೆ.

ಮಿಥುನ
ಇತರರ ತಪ್ಪುಗಳಿಂದಾಗಿ ನಿಮ್ಮ ಕೆಲಸ ವಿಳಂಬವಾಗುವುದು. ಸಹೋದ್ಯೋಗಿ ಜತೆ ಸಂವಹನದ ಕೊರತೆ. ದಿನವಿಡೀ ಅಸಹನೆ, ಅಶಾಂತಿ ಕಾಡುವುದು.

ಕಟಕ
ಸಂಬಂಧದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ. ಸಂಗಾತಿ ಜತೆ ತಪ್ಪಭಿಪ್ರಾಯ ಮೂಡದಂತೆ ನೋಡಿ. ವಿದೇಶದಿಂದ ಶುಭಸುದ್ದಿ ಕೇಳುವಿರಿ.

ಸಿಂಹ
ಮಾನಸಿಕವಾಗಿ ಇಂದು ಉದ್ವಿಗ್ನತೆ. ಇದರಿಂದ ದೈಹಿಕವಾಗಿಯೂ ಸಮಸ್ಯೆ ಉಂಟಾದೀತು. ಆಪ್ತರೇ ನಿಮ್ಮನ್ನು ವಂಚಿಸಿಯಾರು. ಕಣ್ಣು ಕಿವಿ ತೆರೆದಿಡಿ.

ಕನ್ಯಾ
ಸೂಕ್ಷ್ಮಸಂವೇದಿಯಾಗಿ ವರ್ತಿಸುವಿರಿ. ಭಾವನಾತ್ಮಕ  ದೃಢತೆ ಸಾಧಿಸಿ. ನಿಮಗೇ ಅರಿವಿಲ್ಲದೆ ನಿಮ್ಮಿಂದ ಸಮಸ್ಯೆ ಸೃಷ್ಟಿಯಾದೀತು. ಎಚ್ಚರವಿರಲಿ.

ತುಲಾ
ಏಕೋ ಇಂದು ನೀವು ಉತ್ಸಾಹ ಕುಂದಿದಂತೆ ವರ್ತಿಸುವಿರಿ. ಏಕಾಗ್ರಚಿತ್ತತೆ ಇಲ್ಲದೆ  ತಪ್ಪೂ ಉಂಟಾದೀತು. ನಿಮ್ಮ ಸುತ್ತಲಿನ ವಂಚಕರ ಬಗ್ಗೆ ಎಚ್ಚರದಿಂದಿರಿ.

ವೃಶ್ಚಿಕ
ನಿಮ್ಮ ಕುರಿತಂತೆ ಕೆಲವರು ನೆಗೆಟಿವ್ ಚಿತ್ರಣ ನೀಡಲು ಯತ್ನಿಸಿಯಾರು. ಅವರನ್ನು ಕಡೆಗಣಿಸಿ. ನಿಮ್ಮ ಮಾರ್ಗ ಸರಿಯಾಗಿರಲಿ ಅಷ್ಟೆ.

ಧನು
ಆಸ್ತಿಪಾಸ್ತಿಯ ವಿಚಾರದಲ್ಲಿ ನಿಮಗಿಂದು ಪೂರಕ ದಿನವಲ್ಲ. ವೃತ್ತಿಕ್ಷೇತ್ರದಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಕಠಿಣ ನಿಲುವು ಸಡಿಲಿಸಿ. ಹೊಂದಾಣಿಕೆ ಸಾಧಿಸಿ.

ಮಕರ
ಕೌಟುಂಬಿಕ ಹೊಣೆ ಹೆಚ್ಚಳ. ಇದು ನಿಮಗೆ ಅಸಮಾಧಾನ ಸೃಷ್ಟಿಸಿದರೂ ಅದನ್ನು ನೀವು ಸಂಭಾಳಿಸಬೇಕು. ಮಾನಸಿಕ ನಿರಾಳತೆ ಸಾಧಿಸಲು ಯತ್ನಿಸಿ.

ಕುಂಭ
ಈ ದಿನ ಎಂದಿನಂತಿಲ್ಲ. ಉತ್ಸಾಹ ಕಡಿಮೆ. ಅನಾರೋಗ್ಯ ಕಾಡಬಹುದು. ಹೊರಗಿನ ತಿಂಡಿ ತಿನ್ನದಿರಿ. ಕೌಟುಂಬಿಕ ಅಸಮಾಧಾನ.

ಮೀನ
ಉದಾಸೀನತೆ. ಯಾವುದೇ ಕಾರ್ಯ ಮಾಡಲು ನಿರಾಸಕ್ತಿ. ನಿಮ್ಮ ವರ್ತನೆ ಗೊಂದಲ ಸೃಷ್ಟಿಸಬಹುದು. ಸಿನಿಕತನ  ಬಿಟ್ಟು  ಉತ್ಸಾಹ ತುಂಬಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!