ದಿನಭವಿಷ್ಯ: ಇಂದಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಒತ್ತಡ ಕಡಿಮೆ

ಮೇಷ
ವೃತ್ತಿಯಲ್ಲಿ ಎಚ್ಚರದಿಂದ ನಡಕೊಳ್ಳಿ. ಬಾಯಿತಪ್ಪಿ ಮಾತನಾಡದಿರಿ. ಹಣ ಹೂಡಿಕೆಯಲ್ಲಿ ಜಾಗ್ರತೆ ವಹಿಸಿ. ನೀವು ಬಯಸಿದ ಪ್ರತಿಫಲ ದೊರಕದು. ಕೌಟುಂಬಿಕ ಅಶಾಂತಿ.

ವೃಷಭ
ಬಿಡುವಿಲ್ಲದ ದಿನ. ಉದ್ಯಮದಲ್ಲಿ ಯಶಸ್ಸು. ನಿಮ್ಮ ನಿರ್ಧಾರ ಉತ್ತಮ ಫಲ ನೀಡಲಿದೆ. ಉದ್ಯೋಗ ಸಂಬಂಧಿ ದೂರ ಪ್ರಯಾಣ ಸಂಭವ.

ಮಿಥುನ
ನಿಮ್ಮನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುವರು. ಅದಕ್ಕೆ ಅವಕಾಶ ನೀಡದಿರಿ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ವ್ಯಕ್ತಿಯ ಭೇಟಿ.

ಕಟಕ
ಇಂದು ಯಶಸ್ಸನ್ನು ಆನಂದಿಸುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿ ಧೈರ್ಯದಿಂದ ಎದುರಿಸಿ. ನಿಮಗೆ ದೈವಾನುಕೂಲವಿದೆ. ಕಾರ್ಯ ಸಫಲತೆ.

ಸಿಂಹ
ಉದ್ಯೋಗದಲ್ಲಿ  ಅಡ್ಡಿಗಳು. ಆದರೆ ನಿಮ್ಮ ಚಾಣಾಕ್ಷತೆ ನೆರವಿಗೆ ಬರುವುದು.  ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿ ಗೊಂದಲ ಸಂಭವ. ಆರೋಗ್ಯ ಸುಸ್ಥಿರ.

ಕನ್ಯಾ
ನಿಮ್ಮ ಪ್ರಯತ್ನಕ್ಕೆ ಬೇಗನೆ ಫಲ ಸಿಗದು. ಹಾಗಾಗಿ ಮುಂಚಿತವಾಗಿ ಯೋಜನೆ ಹಾಕಿಕೊಳ್ಳಿ. ಪ್ರಯಾಣದ ಸಾಧ್ಯತೆ ಇದೆ. ಎಚ್ಚರ ತಪ್ಪಿ ಮಾತನಾಡದಿರಿ.

ತುಲಾ
ಮನೆಯಲ್ಲಿ ಭಿನ್ನಮತ ಉಂಟಾದೀತು. ನೀವು ಸಂಧಾನಕಾರನ ಪಾತ್ರ ವಹಿಸಬೇಕಾದ ಪ್ರಸಂಗ. ವೃತ್ತಿಯಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಪ್ರತಿಫಲ.

ವೃಶ್ಚಿಕ
ಸುಲಭದಲ್ಲಿ ಯಶ ಸಾಧಿಸುವಿರಿ. ಯಾವುದೇ ಕಾರ್ಯ ಸಾಧಿಸಲು ಹಿಂಜರಿಕೆ ಬೇಕಿಲ್ಲ. ವೃತ್ತಿಯಲ್ಲಿನ ಸವಾಲನ್ನು ಸಮರ್ಥವಾಗಿ ನಿಭಾಯಿಸುವಿರಿ.

ಧನು
ನಿಂತ ನೀರಿನಂತೆ ಇರುವುದನ್ನು ಬಿಟ್ಟುಬಿಡಿ. ಹೊಸ ಪ್ರಯತ್ನಗಳಿಗೆ ಕೈ ಹಾಕಿ. ಸವಾಲುಗಳೇನಿದ್ದರೂ ತಾತ್ಕಾಲಿಕ. ಅಂತಿಮ ಗೆಲುವು ನಿಮ್ಮದೆ.

ಮಕರ
ಕೆಲಸದಲ್ಲಿ ಅಧಿಕ ಒತ್ತಡ. ಸಣ್ಣ ತಪ್ಪು ಘಟಿಸಬಹುದು. ತುಸು ಎಚ್ಚರ ವಹಿಸಿ. ಪ್ರಮುಖ ನಿರ್ಧಾರ ಒಂದೆರಡು ದಿನ ಮುಂದೂಡಿ. ಕೌಟಂಬಿಕ ಸಹಕಾರ.

ಕುಂಭ
ಕುಟುಂಬ ಸದಸ್ಯರ ಕುರಿತಂತೆ ಅತಿಯಾದ ಕಾಳಜಿ ತೋರುವಿರಿ. ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ. ಇಲ್ಲವಾದರೆ ಬಿಕ್ಕಟ್ಟು ಉಂಟಾಗಬಹುದು.

ಮೀನ
ವ್ಯವಹಾರದಲ್ಲಿ ನಿರಾಳತೆ ತೋರಿರಿ. ಹೆಚ್ಚು ಟೆನ್ಸನ್ ತೋರಿದರೆ ತಪ್ಪು ಉಂಟಾದೀತು. ಆರೋಗ ಸಮಸ್ಯೆ ಇದ್ದರೆ ಇಂದು ಪರಿಹಾರ ಕಾಣುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!