ದಿನಭವಿಷ್ಯ: ದೀರ್ಘಕಾಲದ ನಿಮ್ಮ ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ!

ಮೇಷ
ಸಮಸ್ಯೆ ಉಂಟಾದರೆ  ಸಮಾಧಾನದಿಂದ ನಿಭಾಯಿಸಿ. ಆತುರದ ಪ್ರತಿಕ್ರಿಯೆ ತೋರದಿರಿ. ಖಾಸಗಿ ಬದುಕಲ್ಲಿ ಶುಭ ಬೆಳವಣಿಗೆ ಉಂಟಾಗಬಹುದು.

ವೃಷಭ
ಅನಿರೀಕ್ಷಿತ ಪ್ರಸಂಗಗಳಿಗೆ ಸಾಕ್ಷಿಯಾಗುವಿರಿ. ಕೆಲವು ಆಘಾತ ತಂದರೆ, ಇನ್ನು ಕೆಲವು ಹರ್ಷ ತರಲಿದೆ. ನಿಮ್ಮ ಸುತ್ತಲಿನ ನಯವಂಚಕರ ಕುರಿತು ಎಚ್ಚರದಿಂದಿರಿ.

ಮಿಥುನ
ವೃತ್ತಿ ಬದುಕಲ್ಲಿ ಸಮಸ್ಯೆ. ಅದು ನಿಮ್ಮಿಂದ ಉಂಟಾದ ಸಮಸ್ಯೆಯಲ್ಲ. ಅದಕ್ಕೆ ಬೇರೆಯವರು ಕಾರಣರು. ಸೂಕ್ಷ್ಮ ನಿಭಾವಣೆ ಅಗತ್ಯ.

ಕಟಕ
ಇತರರ ಕುರಿತಾದ ನಿಮ್ಮ ಭಾವನೆ, ಪ್ರೀತಿ ವ್ಯಕ್ತಪಡಿಸಲು ಹಿಂಜರಿಯಬೇಕಾಗಿಲ್ಲ. ನಿಮಗೆ ಸೂಕ್ತ ಸ್ಪಂದನೆ ದೊರಕಲಿದೆ. ಆರ್ಥಿಕ ಸ್ಥಿತಿ ಉತ್ತಮ.

ಸಿಂಹ
ಉತ್ಸಾಹದ ದಿನ.  ಕಾರ್ಯಗಳೆಲ್ಲ ಸಲೀಸು. ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಅನವಶ್ಯ ಖರ್ಚು ನಿಯಂತ್ರಣ ಮಾಡಿರಿ.

ಕನ್ಯಾ
ವೃತ್ತಿ ಕ್ಷೇತ್ರದಲ್ಲಿ  ನಿಷ್ಠುರ ವರ್ತನೆ ತೋರದಿರಿ. ಅದರಿಂದ ಬಾಂಧವ್ಯ ಹಾಳಾದೀತು. ಎಲ್ಲರ ಜತೆ ಅರಿತು ವ್ಯವಹರಿಸಲು ಆದ್ಯತೆ ಕೊಡಿರಿ.

ತುಲಾ
ನಿಮ್ಮ ಪ್ರಮುಖ ನಿರ್ಧಾರಕ್ಕೆ ಕುಟುಂಬ ಸದಸ್ಯರ ವಿರೋಧ ಬಂದೀತು. ಕಠಿಣ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಯಶ.

ವೃಶ್ಚಿಕ
ನಿಮ್ಮೆಲ್ಲಾ ಸಮಸ್ಯೆ ಮರೆತು ಜೀವನ ಆನಂದಿಸುವ ಕಾಲವಿದು. ಕೆಟ್ಟ ಅನುಭವ ಮರೆಯಿರಿ. ಸಂತೋಷದ ವಿಷಯಕ್ಕೆ ಗಮನ ಕೊಡಿ.  ಕೌಟುಂಬಿಕ ಸಹಕಾರ.

ಧನು
ಅತ್ಮವಿಶ್ವಾಸ, ಧೈರ್ಯ ಇಂದು ಹೆಚ್ಚು. ಹಾಗಾಗಿ ಯಾವುದೇ ಕಾರ್ಯ ಕಷ್ಟವೆಂದೆನಿಸದು. ಸಮಸ್ಯೆ ಇರುವುದು ಆಪ್ತ ಬಂಧುಗಳ ವರ್ತನೆಯಲ್ಲಿ.

ಮಕರ
ಮನದಲ್ಲಿ ದುಗುಡ ಇದ್ದರೂ ಎಲ್ಲರ ಜತೆ ಬೆರೆಯಲು ಸಫಲರಾಗುವಿರಿ. ಇದು ಅವರೊಂದಿಗೆ ಸಂಬಂಧ ವೃದ್ಧಿಸಲು ಸಹಾಯಕ ಆಗುವುದು.

ಕುಂಭ
ಪ್ರತಿಕೂಲ ಸನ್ನಿವೇಶ ಇದ್ದರೂ ಅದನ್ನು ಸರಿಯಾಗಿ ನಿಭಾಯಿಸುವಿರಿ. ಎಲ್ಲರ ಜತೆ ಹೊಂದಿಕೊಂಡು ಬಾಳುವಲ್ಲಿ ಯಶ ಕಾಣುವಿರಿ.

ಮೀನ
ನಿಮ್ಮ ಮೇಲಧಿಕಾರಿ ಜತೆ ಉತ್ತಮ ಹೊಂದಾಣಿಕೆ. ಹಾಗಾಗಿ ಪ್ರತಿಕೂಲ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಿರಿ. ಧನಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!