Wednesday, September 27, 2023

Latest Posts

ಬೆಂಗಳೂರಿನಲ್ಲಿ ಜಿ-20 ಸಭೆ: ತಾಜ್​ವೆಸ್ಟ್​ಎಂಡ್ ಹೋಟೆಲ್ ಸುತ್ತ ‘ನೋ ಫ್ಲೈ ಝೋನ್’ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ತಾಜ್​ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಆಗಸ್ಟ್ 16ರಿಂದ 20ರವರೆಗ ಜಿ-20 ಸಭೆ (G-20 meeting) ನಡೆಯಲಿದ್ದು, ಈ ಹಿನ್ನೆಲೆ ‘ನೋ ಫ್ಲೈ ಝೋನ್’ ಎಂದು ಘೋಷಣೆ ಮಾಡಲಾಗಿದ್ದು, ತಾಜ್​ವೆಸ್ಟ್​ಎಂಡ್ ಹೋಟೆಲ್​ನ 1 ಕಿ.ಮೀ. ವ್ಯಾಪ್ತಿಯಲ್ಲಿ ಏರ್​ಕ್ರಾಫ್ಟ್, ಡ್ರೋನ್ ಸೇರಿದಂತೆ ಯಾವುದೇ ರೀತಿ ಹಾರಾಟಕ್ಕೆ ನಿಷೇಧ ಹೇರಲಾಗಿದೆ.

ದೇಶ ವಿದೇಶಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸಭೆಯಲ್ಲಿ ಭಾಗಿಯಾಲಿರುವ ದೇಶ-ವಿದೇಶಿ ಗಣ್ಯರು ತಾಜ್​ವೆಸ್ಟ್​ಎಂಡ್ ಹೋಟೆಲ್​ನಲ್ಲಿ ತಂಗಲಿದ್ದಾರೆ.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಂಪಿಯಲ್ಲಿ ಇತ್ತೀಚೆಗೆ ಜುಲೈ 9ರಿಂದ 16ವರೆಗೆ ಜಿ-20 ಶೃಂಗಸಭೆಗೆ ನಡೆದಿತ್ತು. ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನ ಜಿ-20 ನಿಮಿತ್ಯ ಹಂಪಿಯಲ್ಲಿ ಕೈಗೊಳ್ಳಲಾಗಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!