ಇಂದಿನಿಂದ ಜಿ-7 ಶೃಂಗಸಭೆ: ಜೊತೆಯಾಗಲಿದ್ದಾರೆ ಬಲಿಷ್ಠ ನಾಯಕರು!

ಹೊಸದಿಗಂತ ಆನ್‌ಲೈನ್ ಡೆಸ್ಕ್:
ಇಂದು ಮತ್ತು ನಾಳೆ ದಕ್ಷಿಣ ಜರ್ಮನಿಯ ಸ್ಕಲೊಸ್ ಎಲ್ಮಯುನಲ್ಲಿ ಜಿ-7 ಶೃಂಗಸಭೆ ಆಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಹಿತ ಜಗತ್ತಿನ ಏಳು ಬಲಿಷ್ಠ ರಾಷ್ಟ್ರಗಳ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಜರ್ಮನಿ ಚಾನ್ಸಲರ್ ಒಲ್ಫ್ ಸ್ಕೊಲ್ಜ್ ಅವರ ಆಹ್ವಾನದ ಮೇರೆಗೆ ಮೋದಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಶೃಂಗಸಭೆಯಲ್ಲಿ ಉಗ್ರರ ನಿಗ್ರಹ, ಆಹಾರ ಭದ್ರತೆ, ಇಂಧನ ಕುರಿತು ಇತರೆ ದೇಶಗಳ ನಾಯಕರುಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನಿಂದಾಗಿ ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆ ಉದ್ಭವಿಸಿದ್ದು, ಜಾಗತಿಕ ಆಹಾರ ಮತ್ತು ಇಂಧನ ತೊಂದರೆ ಉಂಟಾಗಿದೆ ಈ ಸಂಬಂಧಿಸಿದಂತೆಯೂ ಜಿ7 ನಾಯಕರು ಚರ್ಚಿಸಲಿದ್ದಾರೆ.
ಮಾನವೀಯತೆ ಮೇಲಿನ ಭೌಗೋಳಿಕ ಸಮಸ್ಯೆಗಳ ಪರಿಹಾರ ಕುರಿತ ಜಾಗತಿಕ  ಅಂತಾ ರಾಷ್ಟ್ರೀಯ ಸಹಯೋಗ ವೃದ್ಧಿಗೆ ಜರ್ಮನಿ ಇತರೆ ಪ್ರಜಾಪ್ರಭುತ್ವ ದೇಶಗಳನ್ನೂ ಶೃಂಗಸಭೆಗೆ ಆಹ್ವಾನಿಸಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಜರ್ಮನಿಯಲ್ಲಿ ನಡೆಯುವ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಗಲ್ಫ್ ರಾಷ್ಟ್ರದ ಮಾಜಿ ಪ್ರಧಾನಿ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ
28 ರಂದು ತೆರಳಲಿದ್ದಾರೆ. ಕಳೆದ ಏಳು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಜಾಯೆದ್ ಅಲ್ ನಹ್ಯನ್ ಅವರು ಮೇ 13 ರಂದು ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!