ಜಿ.ಎಸ್.‌ ಲಕ್ಷ್ಮಣನ್‌ ಎಂಬ ಸ್ವಾತಂತ್ರ್ಯ ಹೋರಾಟದ ಧ್ರುವತಾರೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಜಿ.ಎಸ್.‌ ಲಕ್ಷ್ಮಣನ್‌ ಅವರು ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂನಲ್ಲಿ1919 ರ ಫೆಬ್ರವರಿ 22 ರಂದು ಟಿ. ಶ್ರೀನಿವಾಸ ಅಯ್ಯರ್ ಮತ್ತು ಸ್ವರ್ಣಮ್ಮಾಳ್ ದಂಪತಿಗಳಿಗೆ ಜನಿಸಿದರು. ಅವರ ತಂದೆ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು. ಅವರು 1928 ರಲ್ಲಿ ಸೈಮನ್ ಆಯೋಗದ ಬಹಿಷ್ಕಾರದಲ್ಲಿ ಭಾಗವಹಿಸಿದರು. ಜೊತೆಗೆ 1937 ರಲ್ಲಿ ಮದ್ರಾಸ್ ರಾಜ್ಯ ವಿಧಾನಸಭೆಯ ಸದಸ್ಯರಾಗಿದ್ದರು.
ಲಕ್ಷ್ಮಣ ಅಯ್ಯರ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ತಂದೆಯ ಮಾರ್ಗವನ್ನು ಅನುಸರಿಸಿದರು. ಅವರು ಹತ್ತನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಜಮೀನ್ದಾರರ ಶ್ರೀಮಂತ ಮನೆತನದವರಾದರೂ ಖಾದಿ ಪ್ರಚಾರಕ್ಕಾಗಿ ಖಾದಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು 1938 ರಲ್ಲಿ ತಿರುವಂದ್ರಂ ಪಿತೂರಿ ಪ್ರಕರಣದಲ್ಲಿ ಬಂಧಿಸಿ ಜೈಲಿನಲ್ಲಿರಿಸಲಾಯಿತು. 1941 ರಲ್ಲಿ, ವೈಯಕ್ತಿಕ ಅಸಹಕಾರಕ್ಕಾಗಿ ಮತ್ತು 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಎರಡು ವರ್ಷ ಜೈಲಿನಲ್ಲಿ ಕಳೆದರು. ಅವರ ಜೊತೆ ಅವರ ಪತ್ನಿ ಲಕ್ಷ್ಮಿ ಅಮ್ಮಾಳ್ ಕೂಡ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಇಬ್ಬರಿಗೂ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 3000 ದಂಡ ವಿಧಿಸಲಾಗಿತ್ತು. ಹಲವು ವಾರಗಳ ಜೈಲಿನಲ್ಲಿದ್ದ ನಂತರ, ಲಕ್ಷ್ಮಿ ಅಮ್ಮಾಳ್ ಅವರು ಹದಿನೆಂಟು ವರ್ಷಗಳನ್ನು ತಲುಪಿಲ್ಲ ಎಂಬ ಕಾರಣದಿಂದ ಬಿಡುಗಡೆಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!