Wednesday, September 27, 2023

Latest Posts

ಇಂದಿನಿಂದ ದೆಹಲಿಯಲ್ಲಿ ಎರಡು ದಿನ ‘G20 ಶೃಂಗಸಭೆ’: ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನಿಂದ ಎರಡು ದಿನ ‘ಜಿ20 ಶೃಂಗಸಭೆ’ ನಡೆಯಲಿದ್ದು, ಈಗಾಗಲೇ ದೆಹಲಿಗೆ ವಿಶ್ವದ ನಾಯಕರು ಆಗಮಿಸಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಜಿ20 ಶೃಂಗಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇಂದು ಮತ್ತು ನಾಳೆ ಅಂದರೆ ಎರಡು ದಿನಗಳ ಕಾಲಗಳ ನಡೆಯಲಿರುವ ಈ ಸಭೆಯ ಸಂಪೂರ್ಣ ವಿವರ ಇಲ್ಲಿದೆ.

G20 ಶೃಂಗಸಭೆ ವೇಳಾಪಟ್ಟಿ

ಸೆಪ್ಟೆಂಬರ್ 9: ಮೊದಲನೇ ದಿನ

ಬೆಳಗ್ಗೆ 09.30 ರಿಂದ 10.30ರ ವರೆಗೆ ಭಾರತ್ ಮಂಟಪದ ಶೃಂಗಸಭೆಯ ಸ್ಥಳಕ್ಕೆ  ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಆಗಮಿಸಲಿದ್ದಾರೆ. ಸ್ವಾಗತ ಕಾರ್ಯಕ್ರಮ ಜೊತೆಗೆ ಪ್ರಧಾನ ಮಂತ್ರಿ ಜೊತೆಗೆ ಫೋಟೋಶೂಟ್ ಡೆಯಲಿದೆ.

10.30-1.30ರ ವರೆಗೆ ಸೆಷನ್ 1 ನಡೆಯಲಿದ್ದು, ಒಂದು ಭೂಮಿ ಕುರಿತು ಸಮಾವೇಶ ನಡೆಯಲಿದೆ.

1.30-3.00ರ ವರೆಗೆ ಭಾರತ್ ಮಂಟಪದಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ.

3.00-4.45ರ‌ ವರೆಗೆ ಸೆಷನ್ II ನಡೆಯಲಿದ್ದು, ಹಂತ 1ರಲ್ಲಿ ಒಂದು ಕುಟುಂಬ ಕುರಿತು ಸಮಾವೇಶ ನಡೆಯಲಿದೆ. ನಂತರ ಹೊಟೇಲ್‌ಗಳಿಗೆ ತೆರಳಲಿದ್ದಾರೆ.

7.00-8.00ರ ವರೆಗೆ ಭೋಜನಕ್ಕೆ ವಿಶ್ವ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನವಾಗಲಿದೆ.

8.00-9.15ರ ವರೆಗೆ ಊಟದ ನಡುವೆ ಮಾತುಕತೆ ನಡೆಯಲಿದೆ.

9.10-9.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದಲ್ಲಿ ಸೇರುತ್ತಾರೆ. ನಂತರ ಹೋಟೆಲ್‌ಗಳಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ದಿನ 2: ಸೆಪ್ಟೆಂಬರ್ 10

ಬೆಳಗ್ಗೆ 8.15 ರಿಂದ 9.00ರ ವರೆಗೆ ರಾಜ್‌ಘಾಟ್‌ಗೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನವಾಗಲಿದೆ. ನಂತರ ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.

9.00-9.20ರ ನಡುವೆ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಗಾಯನ ಪ್ರದರ್ಶನ ಕೂಡ ನಡೆಯಲಿದೆ.

9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್‌ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ವಾಹನಗಳಲ್ಲಿ ಭಾರತ್ ಮಂಟಪಕ್ಕೆ ನಿರ್ಗಮಿಸಲಿದ್ದಾರೆ.

9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.‌

10.15-10.28ರ ವರೆಗೆ ಸೌತ್ ಪ್ಲಾಜಾ, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ.

10.30-12.30ರ ವರೆಗೆ ಶೃಂಗಸಭೆ ಸಭಾಂಗಣದಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!