ಜಿ20 ಶೃಂಗಸಭೆ ಯಶಸ್ಸು: ಪೊಲೀಸರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ಯಶಸ್ವಿಯಾಗಿದ್ದು, ಹೀಗಾಗಿ ವಿಶ್ವ ನಾಯಕರು ಆಗಮನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸಿದ ಪೊಲೀಸ್‌ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.

ಕಾರ್ಯಕ್ರಮದ ವೇಳೆ ಸೂಕ್ತ ಭದ್ರತೆ ಒದಗಿಸಿದ್ದಕ್ಕಾಗಿ ಧನ್ಯವಾದ ಸೂಚಿಸುವ ಉಪಕ್ರಮವಾಗಿ ಶನಿವಾರ ರಾತ್ರಿ ಪೊಲೀಸ್‌ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಅವರು ಔತಣಕೂಟ ನಡೆಸಲಿದ್ದಾರೆ .

ಭಾರತ ಮಂಟಪ ಸೇರಿದಂತೆ ಜಿ20 ಸಭೆ ನಡೆದ ಸ್ಥಳದಲ್ಲಿನ ಎಲ್ಲಾ ಝೋನ್‌ಗಳಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್‌ ತಂಡಗಳಿಂದ 5 -6 ಸಿಬ್ಬಂದಿಯನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ.

ವಿಶೇಷವಾಗಿ ವೈಯಕ್ತಿಕ ಅಥವಾ ಕುಟುಂಬದ ತೊಂದರೆಗಳಿದ್ದರೂ ಕರ್ತವ್ಯದಲ್ಲಿ ತೊಡಗಿದ ಅಧಿಕಾರಿಗಳನ್ನು ಔತಣಕೂಟಕ್ಕೆ ಕಳುಹಿಸುವಂತೆ ಹೇಳಲಾಗಿದೆ.

ಇನ್ಸ್‌ಪೆಕ್ಟರ್‌ಗಳಿಂದ ಕಾನ್ಸ್‌ಸ್ಟೇಬಲ್‌ವರೆಗಿನ ಒಟ್ಟು 450 ಪೊಲೀಸರು ಔತಣಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!