ಜಿ7 ಶೃಂಗಸಭೆ: ಪ್ರಧಾನಿ ಮೋದಿ ಜೊತೆ ಇಟಲಿ ಪ್ರಧಾನಿ ಮೆಲೋನಿ ಸೆಲ್ಫಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರ ಇಟಲಿಯಲ್ಲಿ ಮುಕ್ತಾಯಗೊಂಡ G7 ಶೃಂಗಸಭೆಯ ಸೈಡ್‌ಲೈನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಯಲ್ಲೇ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಮತ್ತು ನಂತರ ದುಬೈನಲ್ಲಿ ನಡೆದ ಸಿಒಪಿ 28ನೇ ಸಮ್ಮೇಳನದನಲ್ಲಿ ಈ ಹಿಂದೆ ಭೇಟಿಯಾದ ಉಭಯ ನಾಯಕರ ನಡುವಿನ ಒಡನಾಟವು ಹಲವಾರು ಆನ್‌ಲೈನ್ ಮೀಮ್‌ಗಳನ್ನು ಹುಟ್ಟುಹಾಕಿದ್ದವು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ ಪಕ್ಷಗಳ 28ನೇ ಸಮ್ಮೇಳನದ (COP28) ಭಾಗದಲ್ಲಿ ಇಬ್ಬರು ನಾಯಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಎಕ್ಸ್‌ನಲ್ಲಿ ಪಿಎಂ ಮೋದಿಯವರೊಂದಿಗೆ ಚಿತ್ರವನ್ನು ಹಂಚಿಕೊಳ್ಳುವಾಗ, ಮೆಲೋನಿ, “ಸಿಒಪಿ 28, #ಮೆಲೋಡಿಯಲ್ಲಿ ಉತ್ತಮ ಸ್ನೇಹಿತರು” ಎಂದು ಹೇಳಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!