March 10, 2026
Tuesday, March 10, 2026
spot_img

ಸಿದ್ಧಾರೂಢ ಸನ್ನಿಧಿಯಲ್ಲಿ ‘ಗಾನ ಗಂಧರ್ವ’: ಶ್ರೀಗಳ ಆಶೀರ್ವಾದ ಪಡೆದ ಸೋನು ನಿಗಮ್!

ಹೊಸದಿಗಂತ ಹುಬ್ಬಳ್ಳಿ:

ವಾಣಿಜ್ಯ ನಗರಿ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠಕ್ಕೆ ಇಂದು ಗಾಯನ ಲೋಕದ ದಿಗ್ಗಜ, ಮೆಲೋಡಿ ಕಿಂಗ್ ಸೋನು ನಿಗಮ್ ಭೇಟಿ ನೀಡಿದರು. ಮಠದ ಉಭಯ ಶ್ರೀಗಳ ದರ್ಶನ ಪಡೆದ ಅವರು, ದೇವಸ್ಥಾನದ ಆವರಣದಲ್ಲಿ ಕೆಲಕಾಲ ಭಕ್ತಿಭಾವದಿಂದ ಕಳೆದರು.

ಸೋನು ನಿಗಮ್ ಅವರ ಭೇಟಿಯ ಸಂದರ್ಭದಲ್ಲಿ ಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಚನ್ನವೀರ ಮುಂಗರವಾಡಿ ಅವರು ಹಾಗೂ ಮಠದ ಪದಾಧಿಕಾರಿಗಳು ಗಾಯಕನನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮಠದ ಸಂಪ್ರದಾಯದಂತೆ ಸನ್ಮಾನಿಸಿ ಗೌರವಿಸಿದರು.

ಇಂದು ಸೋಮವಾರವಾಗಿದ್ದರಿಂದ ಮಠದಲ್ಲಿ ಭಕ್ತರ ಸಂಖ್ಯೆ ಎಂದಿನಂತೆ ಹೆಚ್ಚಾಗಿತ್ತು. ನೆಚ್ಚಿನ ಗಾಯಕ ಹಠಾತ್ತನೆ ಮಠದಲ್ಲಿ ಕಾಣಿಸಿಕೊಂಡಿದ್ದನ್ನು ಕಂಡು ಭಕ್ತರು ಪುಳಕಿತರಾದರು. ಸೋನು ನಿಗಮ್ ಅವರನ್ನು ಹತ್ತಿರದಿಂದ ನೋಡಲು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.

ಸರಳವಾಗಿ ವರ್ತಿಸಿದ ಸೋನು ನಿಗಮ್ ಅವರು ಭಕ್ತರ ಪ್ರೀತಿಗೆ ಸ್ಪಂದಿಸಿ, ಮಠದ ದೈವಿಕ ಪರಿಸರಕ್ಕೆ ಮನಸೋತರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !