ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಗಗನ್‌ಯಾನ್ʼ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾಕಾಂಕ್ಷೆಯ ಮಿಷನ್‌ಗೆ ಕ್ಷಣಗಣನೆ ಶುರುವಾಗಿದೆ. ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ ಮಿಷನ್-1 (ಟಿವಿ-ಡಿ1 ಫ್ಲೈಟ್ ಟೆಸ್ಟ್) ಮೊದಲ ಮಾನವರಹಿತ ಹಾರಾಟ ಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ. ಶನಿವಾರ (ಅಕ್ಟೋಬರ್ 21) ಬೆಳಿಗ್ಗೆ 8 ಗಂಟೆಗೆ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಮಿಷನ್ ನಭಕ್ಕೆ ಜಿಗಿಯಲಿದೆ.
ಗಗನ್‌ಯಾನ್ ಮಿಷನ್‌ನ ಗುರಿ ಏನು?
ಗಗನ್‌ಯಾನ್ ಮಿಷನ್ 2025ರಲ್ಲಿ ಭೂಮಿಯ ಕಕ್ಷೆಗೆ ಮಾನವರನ್ನು ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ ಇಂದು ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ನಂತರ ಅದನ್ನು ಭೂಮಿಗೆ ಹಿಂತಿರುಗಿಸಲಾಗುತ್ತದೆ. ಈ ವೇಳೆ ನ್ಯಾವಿಗೇಷನ್, ಸೀಕ್ವೆನ್ಸಿಂಗ್, ಟೆಲಿಮೆಟ್ರಿ, ಶಕ್ತಿ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ.ಈ ಪರೀಕ್ಷೆಯು ಇಡೀ ಗಗನ್ಯಾನ್ ಯೋಜನೆಗೆ ಪ್ರಮುಖ ಮೈಲಿಗಲ್ಲು ಎಂದು ಹೇಳಲಾಗಿದೆ.
‘ಕ್ರೂ ಮಾಡ್ಯೂಲ್’ ಎಂಬುದು ರಾಕೆಟ್‌ನ ಪೇಲೋಡ್ ಆಗಿದ್ದು, ಭೂಮಿಯಂತಹ ವಾತಾವರಣದೊಂದಿಗೆ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ವಾಸಯೋಗ್ಯ ಸ್ಥಳವಾಗಿದೆ. ಇದು ಒತ್ತಡಕ್ಕೊಳಗಾದ ಲೋಹದ ‘ಒಳಗಿನ ರಚನೆ’ ಮತ್ತು ಉಷ್ಣ ರಕ್ಷಣೆ ವ್ಯವಸ್ಥೆಗಳೊಂದಿಗೆ ಒತ್ತಡರಹಿತ ‘ಬಾಹ್ಯ ರಚನೆ’ಯನ್ನು ಒಳಗೊಂಡಿದೆ. ಶನಿವಾರದ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ, ‘ಕ್ರೂ ಮಾಡ್ಯೂಲ್’ನಲ್ಲಿ ವಿವಿಧ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಇದು ವಾಹನದ ಕಾರ್ಯಕ್ಷಮತೆಯ ಬಗ್ಗೆ ಮಾಹಿತಿಯನ್ನು ಪಡೆಯಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ.
Mission Gaganyaan:
TV-D1 Test FlightThe test flight can be watched LIVE
from 0730 Hrs. IST
on October 21, 2023
at https://t.co/MX54CwO4IUhttps://t.co/zugXQAYy1y
YouTube: https://t.co/75VtErpm0H
DD National TV@DDNational#Gaganyaan pic.twitter.com/ktomWs2TvN— ISRO (@isro) October 19, 2023