ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಆರೋಪದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಜೈಲಿನ ಹೊರಗೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಫಿಟ್ನೆಸ್ ಕಾಪಾಡಿಕೊಳ್ಳಲು ಚಿಕನ್, ಮಟನ್, ಫ್ರೂಟ್ಸ್ ಜೊತೆಗೆ ಜ್ಯೂಸ್ ಸೇವಿಸುತ್ತಿದ್ದರು. ಆದರೆ ಸದ್ಯ ಜೈಲು ಸೇರಿರುವ ದರ್ಶನ್ ಫಿಟ್ ನೆಸ್ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಜೈಲಿಗೆ ಕಳುಹಿಸುವ ಮುನ್ನ ದರ್ಶನ್ ಜಿಮ್‌ನಲ್ಲಿ ಗಂಟೆಗಟ್ಟಲೆ ತರಬೇತಿ ನೀಡಿದ್ದರು. ಸದ್ಯ ಜೈಲಿನಲ್ಲಿದ್ದರೂ ದರ್ಶನ್ ತಮ್ಮ ದೇಹವನ್ನು ನೋಡಿಕೊಳ್ಳುವುದನ್ನು ಬಿಡುವುದಿಲ್ಲ. ಹೀಗಾಗಿ ಅನ್ನವನ್ನು ಬಿಟ್ಟು ಚಪಾತಿ, ಮುದ್ದೆ ಊಟ ಮಾಡ್ತಿದ್ದಾರೆ. ವಿಟಮಿನ್ ಮಾತ್ರೆಗಳನ್ನೂ ಸೇವಿಸುತ್ತಿದ್ದಾರೆ.
ಆರೋಪಿ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದರೂ ದೈಹಿಕ ಕ್ಷಮತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳದಿದ್ದರೆ ದೇಹಾಕೃತಿ ಹದಗೆಡುತ್ತದೆ ಎಂಬ ಭಯ ದರ್ಶನ್ ಅವರದ್ದು. ಹೀಗಾಗಿ ದರ್ಶನ್ ದೇಹದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ.