ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರಾವಣ ಮಾಸದ ಕಾರಣದಿಂದಾಗಿ ಒಂದೂವರೆ ತಿಂಗಳಿನಿಂದ ಚಿಕನ್ ಹಾಗೂ ಮಟನ್‌ಗೆ ಬೇಡಿಕೆ ಫುಲ್ ಕಡಿಮೆಯಾಗಿತ್ತು.ಇದೀಗ ಗಣೇಶ ಚತುರ್ಥಿ ಮುಗಿದಿದ್ದು, ಮಾಂಸಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ ಒಂದೇ ವಾರದಲ್ಲಿ ಏರಿಕೆಯಾಗಿದೆ.
ಶ್ರಾವಣಮಾಸ ಮುಗಿಯುತ್ತಿದ್ದಂತೆ ಮಾಂಸಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಹೀಗಾಗಿ ಮಾಂಸದ ದರ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದೆ. ಮಟನ್ ಬೆಲೆಯು 800 ರಿಂದ 900 ರೂಗೆ ಏರಿಕೆಯಾಗಿದ್ದು, ಮುಂದಿನ ತಿಂಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು, ಮುಂದಿನ ತಿಂಗಳು ಆಯುಧಪೂಜೆ ಇರುವ ಕಾರಣ ಚಿಕನ್ ಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳ್ತಿದ್ದಾರೆ.