ಕಲಬುರಗಿಯಲ್ಲಿ ಕುಖ್ಯಾತ ಬೈಕ್‌ ಕಳ್ಳರ ಗ್ಯಾಂಗ್‌ ಅಂದರ್‌, 10 ಬೈಕ್‌ ಜಪ್ತಿ

ಹೊಸದಿಗಂತ ವರದಿ ಕಲಬುರಗಿ:

ಕುಖ್ಯಾತ ಬೈಕ್ ಖದೀಮರಿಬ್ಬರನ್ನು ಬಂಧಿಸಿ,10 ಬೈಕ್,ಗಳನ್ನು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಸೇಡಮ್ ತಾಲೂಕಿನ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಮ್ ಪೋಲಿಸರ ಕಾರ್ಯಾಚರಣೆಯಿಂದಾಗಿ ಇಬ್ಬರು ಕುಖ್ಯಾತ ಬೈಕ್ ಕಳ್ಳರಾದ ಸೇಡಮ್ ಪಟ್ಟಣದ ಉಮರ್ ಹಾಗೂ ಅಲ್ತಾಫ್ ಅವರನ್ನು ಪೋಲಿಸರು ಬಂಧಿಸಿದ್ದು, ಬಂಧಿತರಿಂದ 3.5 ಲಕ್ಷ ರೂಪಾಯಿ ಮೌಲ್ಯದ 10 ಬೈಕ್,ಗಳನ್ನು ವಶಕ್ಕೆ ಪಡೆಯಲಾಗಿದೆ.

ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಮ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ವೇಳೆ ಇಬ್ಬರು ಬೈಕ್ ಕಳ್ಳರು ಪೋಲಿಸರ ಬಲೆಗೆ ಬಿದ್ದಿದ್ದಾರೆ.

ಈ ಕುರಿತು ಸೇಡಮ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!