ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆ ಜಿಲ್ಲೆಯ ಕಾರ್ಮಿಕ ಶಿಬಿರದಲ್ಲಿ ತಾತ್ಕಾಲಿಕ ನೀರಿನ ಟ್ಯಾಂಕ್ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಂಪಿ ಚಿಂಚ್ಯಾಡ್ ಟೌನ್ಶಿಪ್ಟ ಭೋಸರಿ ಪ್ರದೇಶದಲ್ಲಿ ಕೆಲವು ಕಾರ್ಮಿಕರು ನೀರಿನ ಟ್ಯಾಂಕ್ ಅಡಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ನೀರಿನ ಒತ್ತಡಕ್ಕೆ ಟ್ಯಾಂಕ್ನ ಗೋಡೆ ಸ್ಫೋಟಗೊಂಡು ಟ್ಯಾಂಕ್ ಕುಸಿದು ಬಿದ್ದಿರುವಂತೆ ತೋರುತ್ತಿದೆ ಎಂದು ಪೊಲೀಸ್ ಕಮಿಷನರ್ ಪಿಂಪಿ ಚಿಂಚ್ಯಾಡ್ ಹೆಚ್ಚುವರಿ ಪೊಲೀಸ್ ಆಯುಕ್ತ ವಸಂತ್ ಪರದೇಶಿ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ..