ಗ್ಯಾಂಗ್ ಸ್ಟಾರ್ ಅತೀಕ್‌ ಅಹ್ಮದ್‌ ಗೆ ಭಾರತ ರತ್ನ ನೀಡಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್‌ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾಂಗ್ ಸ್ಟಾರ್ ಅತೀಕ್‌ ಅಹ್ಮದ್‌ ಹುತಾತ್ಮ ಆತನಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಉತ್ತರ ಪ್ರದೇಶ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರಾಜ್‌ಕುಮಾರ್‌ ಸಿಂಗ್ ಅಲಿಯಾಸ್‌ ರಾಜ್ಜು ಭಯ್ಯಾ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಗ್ಯಾಂಗಸ್ಟರ್‌-ರಾಜಕಾರಣಿಯಾಗಿದ್ದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ನನ್ನು ಇತ್ತೀಚೆಗೆ ಮೂರು ಮಂದಿ ಹಂತಕರು ಪೊಲೀಸ್‌ ಭದ್ರತೆಯಲ್ಲಿರುವಾಗಲೇ ಶೂಟ್‌ ಮಾಡಿ ಕೊಂದಿದ್ದರು.

ಇದೀಗ ಅತೀಕ್‌ ಅಹ್ಮದ್‌ ಈಗ ಹುತಾತ್ಮರಾಗಿದ್ದಾರೆ. ಅವರ ಶವದ ಮೇಲೆ ತ್ರಿವರ್ಣ ಧ್ವಜ ಹಾಕಿ ಗೌರವ ನೀಡಬೇಕಿತ್ತು’ ಎಂದು ಹೇಳಿದ್ದಾರೆ. ಅತೀಕ್ ಅಹ್ಮದ್ ಹತ್ಯೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವೇ ಕಾರಣ ಎಂದು ರಜ್ಜು ಭಯ್ಯಾ ಆರೋಪಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಕಾಂಗ್ರೆಸ್ ಅಭ್ಯರ್ಥಿ ಆಗ್ರಹಿಸಿದ್ದಾರೆ. ಇನ್ನು ರಾಜ್‌ಕುಮಾರ್‌ ಸಿಂಗ್‌ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲಿಯೇ, ಕಾಂಗ್ರೆಸ್‌ ಪಕ್ಷ ಆತನನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ ಎಂದು ಪ್ರಯಾಗ್‌ರಾಜ್‌ ಕಾಂಗ್ರೆಸ್‌ ಅಧ್ಯಕ್ಷ ಕುಮಾರ್‌ ಮಿಶ್ರಾ ಹೇಳಿದ್ದಾರೆ.

ನಗರಸಭೆಯ ವಾರ್ಡ್ ನಂ.43 ದಕ್ಷಿಣ ಮಲಕಾದಿಂದ ಈ ಬಾರಿ ರಾಜ್‌ಕುಮಾರ್‌ ಸಿಂಗ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ರಾಜ್‌ಕುಮಾರ್ ಸಿಂಗ್ ಕಾಂಗ್ರೆಸ್‌ನ ಹಳೆಯ ನಾಯಕ. ಅವರು ಹಿಂದೆಯೂ ಕೌನ್ಸಿಲರ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ರಾಜ್‌ಕುಮಾರ್‌ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here