ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಎಡ್ಮಂಟ್ ನಲ್ಲಿ ನಡೆದ ಗುಂಪು ಹಿಂಸಾಚಾರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಭಾರತೀಯ ಮೂಲದ ಸಿಖ್ ವ್ಯಕ್ತಿ (Sikh man) ಮತ್ತು ಅವನ 11 ವರ್ಷದ ಮಗನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಹರ್ಪ್ರೀತ್ ಸಿಂಗ್ ಉಪ್ಪಲ್, 41, ಮತ್ತು ಅವರ ಮಗನನ್ನು ಗುರುವಾರ ಮಧ್ಯಾಹ್ನ ಗ್ಯಾಸ್ ಸ್ಟೇಷನ್ನ ಹೊರಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಎಡ್ಮಂಟನ್ ಪೊಲೀಸ್ ಸರ್ವೀಸ್ ಆಕ್ಟಿಂಗ್ ಸುಪರಿಟೆಂಡೆಂಟ್ ಕಾಲಿನ್ ಡೆರ್ಕ್ಸೆನ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.
ಈ ವೇಳೆ ಉಪ್ಪಲ್ ಕಾರಿನಲ್ಲಿದ್ದ ಬಾಲಕನ ಯುವ ಸ್ನೇಹಿತ ಯಾವುದೇ ದೈಹಿಕ ಗಾಯಗಳಿಲ್ಲದೆ ಬದುಕುಳಿದಿದ್ದಾನೆ. ಉಪ್ಪಲ್ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದಾಗ ಶೂಟರ್ಗಳಿಗೆ ಉಪ್ಪಲ್ ಅವರ ಮಗ ಕಾರಿನಲ್ಲಿದ್ದನೇ ಎಂದು ತಿಳಿದಿತ್ತೇ ಎಂಬುದರ ಬಗ್ಗೆ ಪೊಲೀಸರಿಗೆ ತಿಳಿದಿಲ್ಲ ಎಂದು ಡೆರ್ಕ್ಸೆನ್ ಹೇಳಿದರು.
ಶೂಟರ್ ಗೆ ಮಗ ಇದ್ದಾನೆಂದು ತಿಳಿದ ನಂತರ, ಉದ್ದೇಶಪೂರ್ವಕವಾಗಿ ಆತನನ್ನು ಗುಂಡಿಕ್ಕಿ ಕೊಂದರು ಎಂದು ಎಡ್ಮಂಟನ್ ಜರ್ನಲ್ ಡೆರ್ಕ್ಸೆನ್ ಹೇಳಿದ್ದಾರೆ. ಗ್ಯಾಂಗ್ ಸದಸ್ಯರು ಮಕ್ಕಳನ್ನು ಕೊಲ್ಲುವುದಿಲ್ಲ, ಆದರೆ ಇಲ್ಲಿ ನಡೆದಿರುವುದೇ ಬೇರೆ. ಇದು ಹುಚ್ಚಾಟದ, ಅಮಾನವೀಯ ಕೃತ್ಯ ಎಂದು ಡೆರ್ಕ್ಸೆನ್ ಹೇಳಿದರು.