Tuesday, May 30, 2023

Latest Posts

ಗಂಗೋತ್ರಿ ರಾಷ್ಟ್ರ ಕಾರ್ಯಕ್ಕೆ ಸೇರುವ ಕೇಂದ್ರವಾಗಲಿ: ಗೋಪಾಲ್ ಜೀ

ಹೊಸದಿಗಂತ ವರದಿ,ಕಲಬುರಗಿ:

ಗಂಗೋತ್ರಿಯೂ, ರಾಷ್ಟ್ರ ನಿಮಾ೯ಣ ಮಾಡುವಂತಹ ಕೇಂದ್ರ ಸ್ಥಾನವಾಗಿ ಹೊರಹೊಮ್ಮುವ ಮೂಲಕ, ಎಲ್ಲರಲ್ಲಿ ರಾಷ್ಟ್ರ ಸೇವೆ ಎಂಬ ಭಾವನೆ ಮೂಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಹ ಕಾಯ೯ದಶಿ೯ ಅಯೋಧ್ಯೆ ಗೋಪಾಲ್ ಹೇಳಿದರು.
ಅವರು ಸೇಡಂ ತಾಲೂಕಿನ ಜನಕಲ್ಯಾಣ ಮಾಗ೯, ವಿಶ್ವ ನಗರ ಚಿಂಚೋಳಿ ರಸ್ತೆಯಲ್ಲಿನ ಮಾತೃಭೂಮಿ ಸೇವಾ ಟ್ರಸ್ಟ್, ನೂತನ ಕಾಯಾ೯ಲಯ ಕಟ್ಟಡ ಗಂಗೋತ್ರಿ ಉದ್ಗಾಟನಾ ಸಮಾರಂಭದಲ್ಲಿ ಮಾತನಾಡಿ,ರಾಷ್ಟ್ ನಿಮಾ೯ಣದ ಕೆಲಸಕ್ಕಾಗಿ ಇಂದು ಸೇಡಂನಲ್ಲಿ ಗಂಗೋತ್ರಿಯೂ ತಲೆ ಎತ್ತಿ ನಿಂತಿದೆ. ವಿದ್ಯಾ ಸಂಸ್ಥೆ ಗಳಿಗೆ ಸೇಡಂ ಕ್ಷೇತ್ರ ಕಾಯ೯ ಮಾಡುತ್ತಿದೆ. ಸ್ವಯಂಸೇವಕ ಇರಲಾರದ ಮನೆ ಸೇಡಂನಲ್ಲಿ ಯಾವ ಮನೆಯೂ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಯ೯ವೂ ಸೇಡಂ, ನ ಪ್ರತಿ ಗ್ರಾಮ,ಹಳ್ಳಿಗಳಲ್ಲಿ ಪಸರಿಸಿ,ರಾಷ್ಟ್ರ ನಿಮಾ೯ಣದ ಕಾಯ೯ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಈ ಗಂಗೋತ್ರಿಯೂ ಆಶ್ರಯವಾಗಲಿದೆ.ಹಿಂದೂ ಸಮಾಜಕ್ಕಾಗಿ ದುಡಿಯುವ ಮಾನಸಿಕತೆಯಿರುವ ಎಲ್ಲರೂ ಈ ಕಾಯ೯ಲಯದಲ್ಲಿ ಬರಬಹುದಾಗಿದೆ ಎಂದರು.

ಅಚ್ಚಾ ಸಚ್ಚಾ ಹಿಂದು ಆಗಲಿ
ಕಳೆದ 97 ವಷ೯ಗಳಿಂದ ಸಂಘವು ಸಮಾಜದಲ್ಲಿ ರಾಷ್ಟ್ರದ ಅಭಿಮಾನದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಹಿಂದೂ ಸಮಾದ ಪರಮವೈಭವದ ಸ್ಥಿತಿಗೆ ಹೋಗಬೇಕೆಂಬ ಸಂಘ ಸ್ಥಾಪಕರಾದ ಡಾ.ಹೆಡಗೆವಾರರ ಕನಸು ಇಂದು ನನಸಾಗುವ ಕೆಲಸ ನಡೆಯುತ್ತಿದ್ದು, ರಾಷ್ಟ್ರ ನಿಮಾ೯ಣದ ಜೊತೆ ಜೊತೆಗೆ ವ್ಯಕ್ತಿ ನಿಮಾ೯ಣದ ಕಾಯ೯ವೂ ಸಂಘವು ನಿರಂತರವಾಗಿ ಮಾಡುತ್ತಿದೆ ಎಂದರು.

ವ್ಯಕ್ತಿ ವ್ಯಕ್ತಿಗಳಲ್ಲಿ ಸಂಘವೂ ನಿರಂತರವಾಗಿ ರಾಷ್ಟ್ರ ಭಕ್ತಿ ತುಂಬುವ ಕೆಲಸ ಮಾಡುತ್ತಿದೆ.ಇಡೀ ಭಾರತದ ತುಂಬೆಲ್ಲ ಈ ರಾಷ್ಟ್ರ ಭಕ್ತಿ ತುಂಬಿಸುವ ಕೆಲಸ ನಡೆಯುತ್ತಿದೆ. ಜಾತಿಗಳ ಮಧ್ಯೆ ಜಗಳ ಹಚ್ಚಿ. ಹಿಂದೂ ಸಮಾಜವನ್ನು ಒಡೆಯುವ ಕುತಂತ್ರ ನಡೆಯುತ್ತಿದೆ.ಆದರೆ ನಾವೆಲ್ಲರೂ ಒಂದೆ ಎಂಬ ಭಾವನೆ ಬೆಳೆಸಿಕೊಂಡು, ಪರಾಕ್ರಮಿ ಹಿಂದೂವಾಗಿ ಬೆಳೆಯಬೇಕು ಎಂದು ಹೇಳಿದರು.

ಕೆಲವು ಮತಾಂಧಾರಿಗಳು ನಮ್ಮ ಮೇಲೆ ಅತೀಕ್ರಮಣವಾಗಿ ದಾಳಿ ಮಾಡುತ್ತೀವೆ. ಆದರೆ ನಾವು ಬರೀ ಮನವಿ,ಪ್ರತಿಭಟನೆಗೆ ಸಿಮಿತವಾಗದೇ,ಪರಾಕ್ರಮಿ ವ್ಯಕ್ತಿತ್ವ ವನ್ನು ಬೆಳೆಸಿಕೊಂಡು ತಕ್ಕ ಉತ್ತರ ನೀಡುವ ಮಟ್ಟಿನಲ್ಲಿ ಬೆಳೆಯಬೇಕು.ಎಲ್ಲಿ ಪರಾಕ್ರಮ ಶಕ್ತಿ ಇದೆಯೋ,ಅಲ್ಲಿ ಭಕ್ತಿ ಯಿಂದ ಪ್ರಣಾಮ ಮಾಡುತ್ತಾರೆ ಎಂದು ನುಡಿದರು.

ಪ್ರಾಂತ ಸಂಘಚಾಲಕರಾದ ಖಗೇಶನ ಪಟ್ಟಣಶೆಟ್ಟಿ ಮಾತನಾಡಿ, ಗಂಗೋತ್ರಿಯೂ ಸಂಘದ ಆಧಾರ ಶಕ್ತಿ ಯಾಗಿ ಬೆಳೆಯಲಿ.ಜನರಿಗೆ ಮಾಗ೯ದಶ೯ನ ಮಾಡುವ ಕೇಂದ್ರ ಆಗಲಿ ಎಂದ ಅವರು, ಜನಸಾಮಾನ್ಯರ ದೇಣಿಗೆಯಿಂದ ಈ ಭವ್ಯವಾದ ಗಂಗೋತ್ರಿಯೂ ತಲೆ ಎತ್ತಿದೆ ಎಂದರು.

2 ಅಂತಸ್ತಿನ ಭವ್ಯವಾದ ಕಟ್ಟಡಕ್ಕೆ ಸರಿಸುಮಾರು 80 ಲಕ್ಷ ವೆಚ್ಚವಾಡಿದ್ದು, ಜನಸಾಮಾನ್ಯರ ದೇಣಿಗೆಯಿಂದ ಮಾತ್ರ ಈ ರಾಷ್ಟ್ರ ನಿಮಾ೯ಣದ ಕೇಂದ್ರ ಸಿದ್ದವಾಗಿ,ರಾಷ್ಟ್ರ ಜಾಗೃತಿಯ ಕಾಯ೯ಕ್ಕೆ ಸಿದ್ದಗೊಂಡಿದೆ.

ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಶಿವಶಂಕರ ಸ್ವಾಮೀಜಿ, ಶ್ರೀ ಪಂಚಾಕ್ಷರ ದೇವರು ಸ್ವಾಮೀಜಿ,ಪ್ರಾಂತ ಸಂಘಚಾಲಕರಾದ ಖಗೇಶನ ಪಟ್ಟಣಶೆಟ್ಟಿ, ಪ್ರಾಂತ ಪ್ರಚಾರಕರಾದ ಶ್ರೀ ನರೇಂದ್ರ ಜೀ, ಪ್ರಾಂತ ಭೌದ್ದಿಕ ಪ್ರಮುಖ ಕೃಷ್ಣ ಜೋಶಿ,ಕಾಯ೯ಕಾರಿಣಿ ಸದಸ್ಯರಾದ ಶ್ರೀಧರ ನಾಡಗೀರ್, ಹಣಮಂತರಾವ ಪಾಟೀಲ್, ಗಿರೀಶ್ ಹೆಬ್ಬಾರ, ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ, ಜಿಲ್ಲಾ ಸಂಘಚಾಲಕರಾದ ಅಶೋಕ್ ಪಾಟೀಲ್,ವಿ.ಎಚ್.ಪಿ ವಿಭಾಗದ ಶಿವಕುಮಾರ್ ಬೋಳಶೆಟ್ಟಿ, ವ್ಯಯಕ್ತೀಕ ಗೀತೆಯನ್ನು ಪೂಜಾ ಆಲಗೂಡ ಹಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!