Wednesday, June 7, 2023

Latest Posts

ಗ್ಯಾಂಗ್​ಸ್ಟರ್ ಅತೀಕ್​ ಅಹ್ಮದ್​​ ಮಗನ ಎನ್​ಕೌಂಟರ್: ಪೊಲೀಸರಿಗೆ ಯುಪಿ ಸಿಎಂ ಯೋಗಿ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶ ಸ್ಪೆಷಲ್​ ಟಾಸ್ಕ್​ ಫೋರ್ಸ್ (STF) ಸಿಬ್ಬಂದಿ ಇಂದು ಝಾನ್ಸಿಯಲ್ಲಿ ಎನ್​ಕೌಂಟರ್​​ನಲ್ಲಿ ಉಮೇಶ್​ ಪಾಲ್ ಹತ್ಯೆ ಕೇಸ್​​ನಲ್ಲಿ ಆರೋಪಿಯಾಗಿದ್ದ ಅಸಾದ್​ ಅಹ್ಮದ್​​ನನ್ನು ಹತ್ಯೆ ಮಾಡಿದ್ದಾರೆ.

ಇವನೊಂದಿಗೆ ಗುಲಾಮ್​ ಎಂಬಾತನನ್ನೂ ಕೊಲ್ಲಲಾಗಿದೆ. ಪುತ್ರ ಅಸಾದ್​ ಅಹ್ಮದ್​​ನನ್ನು ಕಳೆದುಕೊಂಡ ಗ್ಯಾಂಗ್​ಸ್ಟರ್​-ರಾಜಕಾರಣಿ ಅತೀಕ್​ ಅಹ್ಮದ್​ ಒಂದೆಡೆ ಗೋಳಾಡುತ್ತಿದ್ದಾನೆ. ಮತ್ತೊಂದೆಡೆ ಆತನನ್ನು ಕೊಂದು ಹಾಕಿದ ಉತ್ತರ ಪ್ರದೇಶ ಪೊಲೀಸರನ್ನು ಸಿಎಂ ಯೋಗಿ ಆದಿತ್ಯನಾಥ್ ಹೊಗಳಿದ್ದಾರೆ.

2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯಾಗಿತ್ತು. ಅವರ ಕೊಲೆ ಕೇಸ್​​ನಲ್ಲಿ ಸಮಾಜವಾದಿ ಪಕ್ಷದ ಸಂಸದನಾಗಿದ್ದ ಅತೀಕ್ ಅಹ್ಮದ್​ ಆರೋಪ ಸಾಬೀತಾಗಿ ಆತ 2017ರಲ್ಲೇ ಜೈಲುಪಾಲಾಗಿದ್ದಾನೆ. ರಾಜುಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್​ ಎಂಬುವರನ್ನು 2006ರಲ್ಲಿ ಅಪಹರಣ ಮಾಡಿದ ಆರೋಪದಡಿ ಈ ಅತೀಕ್​ ಅಹ್ಮದ್​ಗೆ ಇತ್ತೀಚೆಗೆ ಪ್ರಯಾಗ್​ರಾಜ್​ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಜೈಲಲ್ಲಿರುವ ಅತೀಕ್​​ಗೆ ಸ್ವತಃ ಎನ್​ಕೌಂಟರ್​ ಆಗುವ ಭಯ ಕಾಡುತ್ತಲೇ ಇದ್ದು, ಅದನ್ನವನು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಆದರೆ ಈಗ ಅವರ ಮಗನನ್ನೇ ಯುಪಿ ಪೊಲೀಸರು ಎನ್​ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.

ಉಮೇಶ್ ಪಾಲ್ ಕೊಲೆ ಕೇಸ್​ನಲ್ಲಿ ಆರೋಪಿಗಳಾಗಿದ್ದ ಅರ್ಬಾಜ್ ಖಾನ್ ಮತ್ತು ವಿಜಯ್​ ಚೌಧುರಿ ಅಲಿಯಾಸ್ ಉಸ್ಮಾನ್​​ನ್ನು ಈ ಹಿಂದೆಯೇ ಎನ್​ಕೌಂಟರ್ ಮಾಡಲಾಗಿದೆ. ಅದರೊಂದಿಗೆ ಈಗ ಅಸಾದ್​ ಮತ್ತು ಗುಲಾಮ್​​ನನ್ನು ಉತ್ತರ ಪ್ರದೇಶ ಸ್ಪೆಷಲ್​ ಟಾಸ್ಕ್​ ಫೋರ್ಸ್ ಸಿಬ್ಬಂದಿ ಕೊಂದಿದ್ದಾರೆ.

ಅಸಾದ್​ ಮತ್ತು ಗುಲಾಮ್ ಎನ್​ಕೌಂಟರ್​ ಮಾಡಿದ ಉತ್ತರ ಪ್ರದೇಶ ಪೊಲೀಸ್ ಸ್ಪೆಶಲ್​ ಟಾಸ್ಕ್​ ಫೋರ್ಸ್​​ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಗಳಿದ್ದಾರೆ. ‘ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದಿದ್ದಾರೆ.

ಎನ್​ಕೌಂಟರ್​​ನ ಸಂಪೂರ್ಣ ವಿವರವನ್ನು ರಾಜ್ಯ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಸಂಜಯ್​ ಪ್ರಸಾದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಎಸ್​ಟಿಎಫ್​, ಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿ ಸೇರಿ ಇಡೀ ಪೊಲೀಸ್ ತಂಡದ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!