ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ಗ್ಯಾಂಗ್ಸ್ಟರ್ ಎಜಾಜ್ ಲಕ್ಡಾವಾಲಾ ಕೋರ್ಟ್ಗೆ ಸೊಳ್ಳೆಗಳು ತುಂಬಿರುವ ಪ್ಲಾಸ್ಟಿಕ್ ಬಾಟಲಿ ತಂದಿದ್ದಾನೆ.
ವಿಚಾರಣೆಗಾಗಿ ಕೋರ್ಟ್ಗೆ ಬಂದಾಗ ಕೈಯಲ್ಲಿ ಸೊಳ್ಳೆಯ ಬಾಟಲಿ ಹಿಡಿದು ಬಂದಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ.
ಜೈಲಿನಲ್ಲಿ ಅತಿಯಾದ ಸೊಳ್ಳೆಕಾಟ ಇದೆ, ನಾವು ಎದುರಿಸುತ್ತಿರುವ ಸೊಳ್ಳೆ ಕಾಟವನ್ನು ತೋರಿಸಲು ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಸೊಳ್ಳೆ ಪರದೆ ಬಳಸಲು ಅನುಮತಿ ಬೇಕು ಎಂದು ನ್ಯಾಯಾಲಯಕ್ಕೆ ಈತ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ತಿರಸ್ಕಾರವಾಗಿದೆ.
ಮೊದಲು ಜೈಲು ಅಧಿಕಾರಿಗಳಿಗೆ ಈತ ಮನವಿ ಮಾಡಿದ್ದು, ಭದ್ರತಾ ಕಾರಣಗಳಿಂದ ಮನವಿ ತಿರಸ್ಕರಿಸಲಾಗಿದೆ. ಸೊಳ್ಳೆ ಪರದೆ ಬದಲು ಸೊಳ್ಳೆ ನಿವಾರಕಗಳು, ಓಡೋಮಸ್ನಂಥ ಕ್ರೀಂ ಬಳಸಬಹುದು ಆದರೆ ಸೊಳ್ಳೆ ಪರದೆಗೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ.