ʻಬಾಡಿಗೆ ತಾಯ್ತನ ಅಷ್ಟು ಸುಲಭವಲ್ಲ: ಸಮಂತಾ ಸೆಟ್‌ನಲ್ಲಿ ಯಾರ ಬಳಿಯೂ ಆ ವಿಚಾರ ಹೇಳಿರಲಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮಂತಾ ಮುಖ್ಯಭೂಮಿಕೆಯಲ್ಲಿರುವ ಯಶೋದಾ ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಮಲಯಾಳಂ ಹೀರೋ ಉನ್ನಿ ಮುಕುಂದನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ, ಉನ್ನಿ ಮುಕುಂದನ್ ತೆಲುಗಿನಲ್ಲಿ ಜನತಾ ಗ್ಯಾರೇಜ್ ಮತ್ತು ಭಾಗಮತಿ ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಬಾಡಿಗೆ ತಾಯ್ತನದ ವಿಷಯದ ಮೇಲೆ ಯಶೋದಾ ಸಿನಿಮಾ ತೆರೆಕಾಣಲಿದೆ ಎಂಬುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಈ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನವೊಂದರಲ್ಲಿ ಉನ್ನಿ ಮುಕುಂದನ್ ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾರೆ.

ಬಾಡಿಗೆ ತಾಯ್ತನದ ಬಗ್ಗೆ ಮಾತನಾಡಿರುವ ಉನ್ನಿ ಮುಕುಂದನ್ ʻಸರೊಗಸಿ ಅಂತ ಹೇಳುವುದು ತುಂಬಾ ಸುಲಭ ಆದರೆ, ಬಾಡಿಗೆ ತಾಯ್ತನ ಒಂದು ಭಾವನಾತ್ಮಕ ಪ್ರಯಾಣ, ಅದೊಂದು ಪವಾಡ. ನಮ್ಮ ಪುರಾಣಗಳಲ್ಲಿಯೂ ನಾವು ಇದೇ ರೀತಿಯ ವಿಷಯಗಳನ್ನು ಕೇಳಿದ್ದೇವೆ. ಈ ರೀತಿ ಬಾಡಿಗೆ ತಾಯ್ತನವನ್ನು ಕಾನೂನಾತ್ಮಕವಾಗಿ ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ. ಈ ಚಿತ್ರದಲ್ಲಿ ಬಾಡಿಗೆ ತಾಯ್ತನದ ಕೆಲವು ಅಂಶಗಳನ್ನು ಹಾಗೂ ಹೊರಗಿನ ಸಮಾಜದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ತೋರಿಸಿದ್ದೇವೆ’ ಎಂದರು.

ಸಮಂತಾ ಬಗ್ಗೆ ಮಾತನಾಡುತ್ತಾ ಈ ಚಿತ್ರಕ್ಕಾಗಿ ಸಮಂತಾ ತುಂಬಾ ಕಷ್ಟಪಟ್ಟಿದ್ದಾರೆ. ಹೋರಾಟ ಮತ್ತು ಭಾವನಾತ್ಮಕ ದೃಶ್ಯಗಳು ಅದ್ಭುತವಾಗಿವೆ. ಸಮಂತಾ ಜೊತೆ ಕೆಲಸ ಮಾಡುವಾಗ ಅವರು ಮಯೋಸೈಟಿಸ್ ನಿಂದ ಬಳಲುತ್ತಿದ್ದಾರೆ ಎಂದು ನಮಗ್ಯಾರಿಗೂ ತಿಳಿದಿರಲಿಲ್ಲ. ಈ ವಿಷಯವನ್ನು ಅವರು ಸೆಟ್‌ನಲ್ಲಿ ಯಾರಿಗೂ ಹೇಳಿರಲಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರ ಪೋಸ್ಟ್ ನೋಡಿದಾಗಲೇ ಗೊತ್ತಾಗಿದ್ದು. ವಿಚಾರ ತಿಳಿದು ತುಂಬಾ ಬೇಸರವಾಗಿದೆ. ಶೀಘ್ರದಲ್ಲೇ ಪೂರ್ಣ ಆರೋಗ್ಯದಿಂದ ಸಮಂತಾ ಮರಳಬೇಕೆಂದು ಬಯಸುತ್ತೇನೆ ಎಂದು ಉನ್ನಿ ಮುಕುಂದನ್‌ ಆಶಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!