November 6, 2026
Friday, November 6, 2026
spot_img

‘ದೂಸ್ರಾ’ ಸಿನಿಮಾ ವಿರುದ್ಧ ಗಂಗೂಲಿ ಕೇಸ್: ನಿರ್ಮಾಪಕರಿಗೆ 2 ಕೋಟಿ ರೂ. ಠೇವಣಿ ಇಡಲು ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಹೆಸರು ಮತ್ತು ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂಬ ವಿವಾದ ‘ದೂಸ್ರಾ’ ಚಿತ್ರದ ಸುತ್ತ ಹೊಸ ತಿರುವು ಪಡೆದುಕೊಂಡಿದೆ.

ಈ ಕುರಿತು ಗಂಗೂಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಚಿತ್ರವು ಅವರ ವ್ಯಕ್ತಿತ್ವ ಹಕ್ಕುಗಳನ್ನು ಪ್ರಾಥಮಿಕವಾಗಿ ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಚಿತ್ರದ ಚಿತ್ರಮಂದಿರ ಪ್ರದರ್ಶನಕ್ಕೆ ತಡೆ ನೀಡದೆ, ನಿರ್ಮಾಪಕರಿಗೆ 2 ಕೋಟಿ ಠೇವಣಿ ಇಡುವಂತೆ ಹಾಗೂ ಸೂಕ್ತ ಡಿಸ್ಕ್ಲೈಮರ್ ಸೇರಿಸುವಂತೆ ಸೂಚಿಸಿದೆ.

ವ್ಯಕ್ತಿತ್ವದ ವಾಣಿಜ್ಯ ಬಳಕೆಗೆ ಆಕ್ಷೇಪ

ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠ, ‘ದೂಸ್ರಾ’ ಚಿತ್ರವು ಕೇವಲ ಐತಿಹಾಸಿಕ ಘಟನೆಗಳ ನಿರೂಪಣೆಗೆ ಸೀಮಿತವಾಗಿಲ್ಲ ಎಂದು ಗಮನಿಸಿದೆ. ಗಂಗೂಲಿ ಅವರ ಹೆಸರು, ಗುರುತು ಮತ್ತು ವ್ಯಕ್ತಿತ್ವವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ನಿರ್ಮಾಪಕರಿಗೆ ಹಣ ಠೇವಣಿ ಮತ್ತು ಡಿಸ್ಕ್ಲೈಮರ್ ಸೇರಿಸುವ ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ:

ಗಂಗೂಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ

ತಮ್ಮ ವ್ಯಕ್ತಿತ್ವ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸೌರವ್ ಗಂಗೂಲಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗಂಗೂಲಿ ಅವರ ಜೀವನಾಧಾರಿತ ‘ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ’ ಚಿತ್ರವನ್ನು ನಿರ್ಮಿಸುತ್ತಿರುವ ಲವ್ ಫಿಲ್ಮ್ಸ್ ಎಲ್‌ಎಲ್‌ಪಿಯೂ ಈ ಮೊಕದ್ದಮೆಯಲ್ಲಿ ಭಾಗಿಯಾಗಿದೆ. ಅಕ್ಟೋಬರ್ 23ರಂದು ನ್ಯಾಯಾಲಯ ‘ದೂಸ್ರಾ’ ಚಿತ್ರದ ನಿರ್ಮಾಪಕರಿಗೆ ಗಂಗೂಲಿ ಅವರ ಅರ್ಜಿಗೆ ಉತ್ತರಿಸುವಂತೆ ಸೂಚಿಸಿತ್ತು. ಜೊತೆಗೆ ಸಿನಿಮಾದ ಪ್ರದರ್ಶನ ಏರ್ಪಡಿಸುವಂತೆಯೂ ಕೇಳಿತ್ತು.

ಚಿತ್ರದ ಬಿಡುಗಡೆಗೆ ತಡೆಯಿಲ್ಲ

‘ದೂಸ್ರಾ: ಇಂಡಿಯಾಸ್ ಅದರ್ ಫ್ರೀಡಂ ಸ್ಟ್ರಗಲ್’ ಕ್ರೀಡಾ ಹಿನ್ನೆಲೆಯ ಚಿತ್ರವಾಗಿದ್ದು, ಅಭಯ್ ದೇವ್ ನಿರ್ದೇಶನ ಮಾಡಿದ್ದಾರೆ. ಪ್ಲಬಿತಾ ಬೋರ್ತಾಕೂರ್, ಅಂಕುರ್ ವಿಕಲ್ ಮತ್ತು ಸಮಿಧಾ ಗುರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗಿದೆ.

Must Read