ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ನಾಳೆ ತೆರೆ ಮೇಲೆ ಬರಲಿದೆ. ಈ ಮಧ್ಯೆ ನಿನ್ನೆ ರಾತ್ರಿ ಮುಂಬೈನಲ್ಲಿ ತಾರೆಯರಿಗಾಗಿ ಸ್ಪೆಷಲ್ ಸ್ಕ್ರೀನಿಂಗ್ ನಡೆದಿದ್ದು, ಸಿನಿ ಗಣ್ಯರು ಸಿನಿಮಾ ನೋಡಿ ಸಿಕ್ಕಾಪಟ್ಟೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ.
ಆಲಿಯಾ ಭಟ್‌ಗೆ ಸಪೋರ್ಟ್ ನೀಡಲು ನಟಿ ದೀಪಿಕಾ ಪಡುಕೋಣ್ ಕೂಡ ಬಿಳಿ ಸೀರೆಯುಟ್ಟು ಸಿನಿಮಾ ವೀಕ್ಷಿಸಿದ್ದಾರೆ. ಇನ್ನು ರೇಖಾ, ಸಾರಾ ಅಲಿ ಖಾನ್, ಕೃತಿ ಸನೋನ್, ವಿಕ್ಕಿ ಕೌಶಲ್, ಅನನ್ಯಾ ಪಾಂಡೆ, ರಿತೇಶ್ ದೇಶ್‌ಮುಖ್ ಕೂಡ ಸಿನಿಮಾ ವೀಕ್ಷಿಸಿದ್ದಾರೆ.
ಕೆಲ ಸಂಕಷ್ಟದ ನಡುವೆ ಸಿನಿಮಾ ನಾಳೆ ತೆರೆ ಕಾಣುತ್ತಿದ್ದು, ಆಲಿಯಾ ನಟನೆಗೆ ಬಾಲಿವುಡ್ ಸೈ ಎಂದಿದೆ.
ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಮಕ್ಕಳ ಹಕ್ಕಿಗಾಗಿ ಹೋರಾಡುವ ಗಂಗೂಬಾಯಿ ಜೀವನಾಧಾರಿತ ಚಿತ್ರ ಇದಾಗಿದೆ.