Tuesday, March 28, 2023

Latest Posts

ವಂದೇ ಭಾರತ್ ರೈಲಿನಲ್ಲಿ ಕಸದ ರಾಶಿ! ಫೋಟೋ ವೈರಲ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಒಳಭಾಗದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಕಸವನ್ನು ನೆಲದ ಮೇಲೆ ಹರಡಿರುವುದನ್ನು ಕಾಣಬಹುದು. ಇದು ರೈಲೋ, ಕಸದ ಬುಟ್ಟಿಯೋ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಅವನೀಶ್ ಶರಣ್ ಅವರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಖಾಲಿ ಬಾಟಲಿಗಳು, ಆಹಾರದ ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಚೀಲಗಳು ರೈಲಿನೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಾಣಬಹುದು.

ಈ ಚಿತ್ರದಲ್ಲಿ ಸ್ವಚ್ಛತಾ ಕೆಲಸಗಾರನು ನೆಲವನ್ನು ಸ್ವಚ್ಛಗೊಳಿಸಲು ಕೈಯಲ್ಲಿ ಪೊರಕೆ ಹಿಡಿದಿರುವುದನ್ನು ತೋರಿಸುತ್ತದೆ. ಚಿತ್ರವನ್ನು ಅವ್ನೀಶ್ ಶರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸ್ವಚ್ಛತೆ ಕಾಪಾಡದ ಪ್ರಯಾಣಿಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ಅನುಕೂಲತೆಗಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪರಿಚಯಿಸಲಾಗಿದೆ. ಆದರೆ ರೈಲಿನಲ್ಲಿ ಕಸದ ರಾಶಿ ಎಸೆದಿರುವ ಪ್ರಯಾಣಿಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!