ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳುಳ್ಳಿ ರೇಟ್ ದುಬಾರಿಯಾದ ಹಿನ್ನೆಲೆಯಲ್ಲೇ ಮಾರುಕಟ್ಟೆಗೆ ಸಿಮೆಂಟ್ ಬೆಳ್ಳುಳ್ಳಿ ಕಾಲಿಟ್ಟಿದೆ.
ಬೆಳ್ಳುಳ್ಳಿ ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಎಂದು ಗೊತ್ತಾಗಿರುವ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದ್ದು, ಒಳಗಡೆ ನೋಡಿದಾಗ ಸಿಮೆಂಟ್ ಕಂಡುಬಂದಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿ ಮಾರಾಟವಾಗಿರುವ ಘಟನೆಗಳು ಪತ್ತೆಯಾಗಿವೆ. ಮೊದಲು ಸಿಮೆಂಟ್‌ನಲ್ಲಿ ಬೆಳ್ಳುಳ್ಳಿ ತಯಾರಿಸಿ ಅದಕ್ಕೆ ಬಿಳಿ ಬಣ್ಣ ಹಚ್ಚಲಾಗಿದೆ.